ಯಾದಗಿರಿ: ತಾಲೂಕಿನ ಪಸಪೂಲ ತಾಂಡಾ ನಿವಾಸಿಗಳಿಗೆ ಶೌಚಾಲಯ ನಿರ್ಮಾಣದ ಸಹಾಯಧನಕ್ಕೆ ಸಂಬಂಧಿಸಿದಂತೆ ಪಸಪೂಲ ಗ್ರಾಪಂ ಪಿಡಿಒ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ತಾಂಡಾ ನಿವಾಸಿಗಳು ಜಿಪಂ ಸಿಇಒ ಡಾ| ಅವಿನಾಶ ಮೇನನ್ ರಾಜೇಂದ್ರನ್ ಅವರಿಗೆ ಮನವಿ ಸಲ್ಲಿಸಿದರು.
ಸ್ವತ್ಛ ಭಾರತ ಅಭಿಯಾನದಡಿ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಕ್ಕೆ ಸರಕಾರ ಸಾಕಷ್ಟು ಅನುದಾನ ನೀಡಿದರೂ
ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೆ ಗ್ರಾಪಂ ಪಿಡಿಒ ಗ್ರಾಮೀಣ
ಪ್ರದೇಶದ ಜನತೆ ಜತೆ ದರ್ಪದ ವರ್ತನೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಸಪೂಲ ಗ್ರಾಪಂ ಪಿಡಿಒ ಅವರನ್ನು ಅಮಾನತುಗೊಳಿಸಬೇಕು. ತಾಂಡಾ ನಿವಾಸಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಮ್ಮ ಕರವೇ ಜಿಲ್ಲಾಧ್ಯಕ್ಷ ರವಿ ಕೆ. ಮುದ್ನಾಳ, ಶಂಕರ ರಾಠೊಡ, ರಾಜು ರಾಠೊಡ, ಕಾಶೀನಾಥ ರಾಠೊಡ, ರೆಡ್ಯಾ ರಾಠೊಡ, ನಿಂಗಪ್ಪ ರಾಠೊಡ, ಚೆನ್ನಪ್ಪ ರಾಠೊಡ, ಅನಿಲ ರಾಠೊಡ, ವಿಜಯಕುಮಾರ ರಾಠೊಡ, ರಾಮು ರಾಠೊಡ, ಶಿವರಾಜ ರಾಠೊಡ, ಸೋಮನಾಥ ರಾಠೊಡ, ಶಂಕರ ರಾಠೊಡ ಇತರರು ಇದ್ದರು.