ಶಿರಸಿ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಪಡೆಯಲುಜನರು ಆಸಕ್ತರಾಗಿದ್ದಾರೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಸುಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿಬೆಳಗ್ಗೆಯಿಂದ ಸುಮಾರು 1 ಗಂಟೆ ತನಕ ಸುಮಾರು95 ಜನರಿಗೆ ಲಸಿಕೆ ನೀಡಲಾಗುತ್ತದೆ. ಆಧಾರ್ ನಂಬರ್ ಸಹಿತ ಅವರ ಹೆಸರನ್ನು ದಾಖಲಿಸುವಾಗಸರ್ವರ್ ಸಮಸ್ಯೆ ಇವರನ್ನು ಕಾಡುತ್ತಿದೆ. ಮೂರು ಜನರಿದ್ದರೂ ಹೈರಾಣಾಗುತ್ತಿದ್ದಾರೆ.
ನಗರ ಹಾಗೂ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಕೋವಿಡ್ ಲಸಿಕೆನೀಡಲಾಗುತ್ತಿದೆ. ಬಿಪಿ, ಶುಗರ್ ಸಹಿತ ಸಂಕೀರ್ಣಸಮಸ್ಯೆಯುಳ್ಳ 45 ವರ್ಷ ಮೇಲ್ಪಟ್ಟವರಿಗೆಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆನೀಡಲಾಗುತ್ತಿದೆ. ಆದರೆ ಪಟ್ಟಣದಲ್ಲಿನ ಆರೋಗ್ಯಕೇಂದ್ರದಲ್ಲೇ ನೆಟ್‌ವರ್ಕ್ ಸಮಸ್ಯೆಯಾದರೆ, ಹಳ್ಳಿಭಾಗದಲ್ಲಿ ಏನಾಗಬಾರದು ಎನ್ನುತ್ತಿದ್ದಾರೆ.
ವಿಳಂಬವಾದರೂ ಜನರು ಸರತಿಯಲ್ಲಿ ಕುಳಿತು ಲಸಿಕೆ ಪಡೆಯುತ್ತಿದ್ದಾರೆ. ಟೋಕನ್ ಪಡೆಯದೇಬಂದರೂ ಅವರಿಗೂ 19 ಜನರಿದ್ದರೆ ಒಂದು ತಂಡಮಾಡಿ ಲಸಿಕೆ ನೀಡಲಾಗುತ್ತಿದೆ. ಆದಾರೂ ಈನೆಟ್‌ವರ್ಕ್ ವೇಗವಾಗಿದ್ದರೆ ಇನ್ನಷ್ಟು ವಿಸ್ತಾರವಾಗಿಲಸಿಕೆ ನೀಡುವ ಪ್ರಮಾಣ ಹೆಚ್ಚಿಸಬಹುದಾಗಿತ್ತುಎಂಬುದು ವೈದ್ಯರ ಅಭಿಪ್ರಾಯವಾಗಿದೆ. ಈ ಮಧ್ಯೆ ಜಿಲ್ಲಾ ಆರೋಗ್ಯಾ ಧಿಕಾರಿ ಡಾ| ಶರದ್ ನಾಯಕಉದಯವಾಣಿಯೊದಿಗೆ ಮಾತನಾಡಿ, ನೆಟ್‌ವರ್ಕ್ ಸಮಸ್ಯೆಯನ್ನು ಹಿರಿಯ ಅಧಿ ಕಾರಿಗಳಗಮನಕ್ಕೆ ತರಲಾಗಿದೆ. ಸರಕಾರದ ಸೂಚಿತಮಾರ್ಗದರ್ಶಿಯಂತೆ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗುತ್ತದೆ ಎಂದೂ ತಿಳಿಸಿದ್ದಾರೆ.
ಲಸಿಕೆ ನೀಡಿಕೆ ಆನ್‌ಲೈನ್ ಪ್ರಕ್ರಿಯೆ ಆಗಿದ್ದರಿಂದ ಕೆಲವೆಡೆ ಕೆಲವೊಮ್ಮೆಸಮಸ್ಯೆ ಆಗುತ್ತದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
– ಡಾ| ಶರದ್ ನಾಯಕ, ಜಿಲ್ಲಾ ಆರೋಗ್ಯಾಧಿಕಾರಿ
ಮಾಹಿತಿ ಭರಣ ಮಾಡಿದ ಬಳಿಕವೇ ಲಸಿಕೆ ನೀಡುತ್ತಾರೆ. ಆದರೆ, ಇಂಟರ್‌ನೆಟ್‌ಸಮಸ್ಯೆ ನೀಗಿಸಿಕೊಂಡರೆ ಇನ್ನಷ್ಟು ಜನರಿಗೆಲಸಿಕೆ ಬೇಗ ಕೊಡಲು ಸಾಧ್ಯ. ಸರಕಾರ ಈಸಮಸ್ಯೆ ನಿವಾರಿಸಬೇಕು. ಇಲ್ಲವಾದಲ್ಲಿ ಗುರಿತಲುವುವದು ಕಷ್ಟವಾಗಬಹುದು. –
ಎಲ್.ವಿ. ಹೆಗಡೆ, ಸ್ಥಳೀಯ