ಹೊಸದಿಲ್ಲಿ: ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಕಪ್‌ಗೆ ಪ್ರವಾಸಗೈಯುವ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡ ವ್ಯವಸ್ಥಾಪಕರು ಆಡಳಿತಗಾರರ ಸಮಿತಿ (ಸಿಒಎ) ಬಳಿ ಮನವಿಯೊಂದನ್ನು ಸಲ್ಲಿಸಿದೆ. ಆ ಮನವಿಯಲ್ಲಿ ಇಂಗ್ಲೆಂಡ್‌ನಲ್ಲಿ ಭಾರತೀಯ ಆಟಗಾರರಿಗೆ ಬೇಕಾಗುವಷ್ಟು ಬಾಳೆ ಹಣ್ಣು, ತಮಗೆ ಮೀಸಲಾದ ಒಂದು ರೈಲ್ವೇ ಬೋಗಿ, ಹಾಗೆಯೇ ಪ್ರವಾಸದ ಪೂರ್ಣಾವಧಿಯಲ್ಲಿ ಪತ್ನಿಯರನ್ನು ಜತೆಗಿಟ್ಟುಕೊಳ್ಳಲು ಅನುಮತಿ ನೀಡಬೇಕೆಂದು ತಿಳಿಸಲಾಗಿದೆ.
ಹೈದರಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್‌ಗೂ ಮುನ್ನ ಆಡಳಿತಗಾರರ ಸಮಿತಿ ಜತೆ ತಂಡ ವ್ಯವಸ್ಥಾಪಕರು ನಡೆಸಿದ ಪರಿಶೀಲನಾ ಸಭೆಯಲ್ಲಿ ಈ ಬೇಡಿಕೆಯನ್ನು ಇರಿಸಲಾಗಿತ್ತು.
ಭಾರತೀಯ ಆಟಗಾರರಿಗೆ ಅವರ ಆಯ್ಕೆಯ ಹಣ್ಣುಹಂಪಲು ನೀಡಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿಫಲವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಆಡಳಿತಗಾರರ ಸಮಿತಿ ಬಿಸಿಸಿಐ ವೆಚ್ಚದಲ್ಲಿ ಹಣ್ಣುಗಳನ್ನು ತರುವಂತೆ ತಂಡ ವ್ಯವಸ್ಥಾಪಕರಲ್ಲಿ ಆಟಗಾರರು ಮನವಿ ಮಾಡಬೇಕಿತ್ತು ಎಂದು ತಿಳಿಸಿದೆ. ಜಿಮ್ ಹೊಂದಿರುವ ಹೊಟೇಲ್‌ಗಳ ವ್ಯವಸ್ಥೆ ಹಾಗೂ ಪ್ರವಾಸದ ವೇಳೆ ಪತ್ನಿಯರು ಜತೆಯಾಗಿ ಇರುವ ಕಾಲಾವದಿಯೂ ಬೇಡಿಕೆಯಲ್ಲಿ ಒಳಗೊಂಡಿದೆ. ಈ ಸಭೆಯಲ್ಲಿ ನಾಯಕ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಕೋಚ್ ರವಿಶಾಸಿŒ , ಆಯ್ಕೆ ಸಮಿತಿ ಅಧ್ಯಕ್ಷ ಎಂ. ಎಸ್. ಕೆ ಪ್ರಸಾದ್ ಉಪಸ್ಥಿತರಿದ್ದರು.
ಇದರೊಂದಿಗೆ ಇಂಗ್ಲೆಂಡ್‌ನಲ್ಲಿ ಆಟಗಾರರು ರೈಲಿನಲ್ಲಿ ಪಯಣಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಆದರೆ ಈ ಮನವಿಗೆ ಭದ್ರತೆಯ ಕಾರಣಗಳಿಗಾಗಿ ಆರಂಭದಲ್ಲಿ ಆಡಳಿತಗಾರರ ಸಮಿತಿ ಒಪ್ಪಿಗೆ ನೀಡಿರಲಿಲ್ಲ. “ಆಡಳಿತಗಾರರ ಸಮಿತಿ ಆಟಗಾರರ ರಕ್ಷಣೆಯ ಕುರಿತು ಭಯಪಟ್ಟಿದ್ದರು. ಆದರೆ ಕೊಹ್ಲಿ ಇಂಗ್ಲೆಂಡ್ ತಂಡ ರೈಲಿನಲ್ಲೇ ಪಯಣಿಸುತ್ತದೆ ಎಂದು ತಿಳಿಸಿ. ಒಂದು ಪೂರ್ಣ ರೈಲ್ವೇ ಬೋಗಿಯನ್ನು ತಂಡಕ್ಕಾಗಿಯೇ ನೀಡುವಂತೆ ಮನವಿ ಮಾಡಿಕೊಂಡರು. ರೈಲಿನಲ್ಲಿ ಆಟಗಾರರು ಪಯಣಿಸಿದರೆ ಅಭಿಮಾನಿಗಳು ತೊಂದರೆ ನೀಡುತ್ತಾರೆ ಎಂಬ ಕಾರಣಕ್ಕೆ ಮೊದಲು ತಿರಸ್ಕರಿಸಿತ್ತು. ಅಂತಿಮವಾಗಿ “ಅಲ್ಲಿ ಏನಾದರೂ ತೊಂದರೆಯಾದರೆ ಅದಕ್ಕೆ ಆಡಳಿತಗಾರರ ಸಮಿತಿ ಅಥವಾ ಬಿಸಿಸಿಐ ಜವಾಬ್ದಾರಿಯಲ್ಲ ಎಂಬ ಶರತ್ತಿನ ಮೇಲೆ ಈ ಬೇಡಿಕೆಗೆ ಅನುಮತಿ ನೀಡಿದೆ.