ಮುಂಬಯಿ : ಅಮೆರಿಕದ ಪ್ರಮುಖ ಡೆಲ್ಟಾ ಏರ್ ಲೈನ್ಸ್ ವಿಮಾನಯಾನ ಸಂಸ್ಥೆಯು ಈ ವರ್ಷ ಡಿಸೆಂಬರ್ ನಿಂದ ತಾನು ಮುಂಬಯಿ-ನ್ಯೂಯಾರ್ಕ್ ನಡುವಿನ ನೇರ ತಡೆ ರಹಿತ ವಿಮಾನಯಾನ ಸೇವೆಯನ್ನು ಪುನರಾರಂಭಿಸುವುದಾಗಿ ಇಂದು ಬುಧವಾರ ಪ್ರಕಟಿಸಿದೆ.
ಗಲ್ಫ್ ವಿಮಾನ ಯಾನ ಸಂಸ್ಥೆಗಳಿಂದ ಒದಗಿದ ಕಠಿನ ಸ್ಪರ್ಧೆಯ ಪರಿಣಾವಾಗಿ ಡೆಲ್ಟಾ ಏರ್ ಲೈನ್ಸ್ ದಶಕದ ಹಿಂದೆ ಮುಂಬಯಿ – ನ್ಯೂಯಾರ್ಕ್ ತಡೆ ರಹಿತ ವಿಮಾನಯಾನ ಸೇವೆಯನ್ನು ನಿಲ್ಲಿಸಿತ್ತು.
ಪ್ರಕೃತ ಭಾರತದ ಏರಿಂಡಿಯಾ ಸಂಸ್ಥೆ ಮಾತ್ರವೇ ಮುಂಬಯಿ-ನ್ಯೂಯಾರ್ಕ್ ನೇರ ವಿಮಾನಯಾನ ಸೌಕರ್ಯವನ್ನು ಒದಗಿಸುತ್ತಿದೆ. ಈ ಸೌಕರ್ಯವನ್ನು ವಾರಕ್ಕೆ ಮೂರು ಬಾರಿ ಅದು ನೀಡುತ್ತಿದೆ.
ಮುಂಬಯಿ – ನ್ಯೂಯಾರ್ಕ್ ನೇರ ವಿಮಾನಯಾನ ಸೇವೆಯು ಡಿ.24ರಿಂದ ಆರಂಭವಾಗಲಿದೆ ಎಂದು ಡೆಲ್ಟಾ ಏರ್ ಲೈನ್ಸ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.