Advertisement
ಅಂತಿಮ ಓವರಿನಲ್ಲಿ ಡೆಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ರವೀಂದ್ರ ಜಡೇಜ ಎಸೆದ ಈ ಓವರನ್ನು ಆರಂಭದಲ್ಲಿ ಧವನ್ ಎದುರಿಸಿದ್ದರು. ಮೊದಲ ಎಸೆತ ವೈಡ್ ಆಗಿದ್ದರೆ ಎರಡನೇ ಎಸೆತದಲ್ಲಿ ಧವನ್ ಒಂಟಿ ರನ್ ತೆಗೆದರು. ಮತ್ತಿನೆರಡು ಎಸೆತಗಳಲ್ಲಿ ಅಕ್ಷರ್ ಸಿಕ್ಸರ್ ಬಾರಿಸಿ ರೋಮಾಂಚನಗೊಳಿಸಿದರು. ನಾಲ್ಕನೇ ಎಸೆತದಲ್ಲಿ ಎರಡು ರನ್ ಬಂದರೆ ಐದನೇ ಎಸೆತದಲ್ಲಿ ಮತ್ತೆ ಸಿಕ್ಸರ್ ಬಾರಿಸಿದ ಅಕ್ಷರ್ ಡೆಲ್ಲಿಗೆ ಸ್ಮರಣೀಯ ಗೆಲುವು ತಂದುಕೊಟ್ಟರು. ಈ ಗೆಲುವಿನಿಂದ ಡೆಲ್ಲಿ ತಂಡ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ವಾಟ್ಸನ್ 28 ಎಸೆತ ಎದುರಿಸಿ ಆರು ಬೌಂಡರಿ ಒಳಗೊಂಡಂತೆ 36 ರನ್ ಬಾರಿಸಿದರು. ಶಿಖರ್ ಧವನ್ ಅವರಿಂದ ಒಂದು ಜೀವದಾನ ಪಡೆದ ಫಾ ಡು ಪ್ಲೆಸಿಸ್ ಮತ್ತೆ ಧವನ್ ಅವರೀಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
Related Articles
ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ನಾಯಕ ಧೋನಿ ಈ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಅನ್ರಿಚ್ ನೋರ್ಜೆ ಈ ವಿಕೆಟ್ ಉರುಳಿಸಿದರು.
Advertisement
ಮಧ್ಯಮ ಕ್ರಮಾಂಕದಲ್ಲಿ ರಾಯುಡು ಮತ್ತು ಜಡೇಜ ಸಿಡಿದು ನಿಂತು ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಈ ಜೋಡಿ 21 ಎಸೆತಗಳಿಂದ 50 ರನ್ ಸೂರಗೈದಿತು. ರಾಯುಡು ಅಜೇಯ 25 ಎಸೆತಗಳಿಂದ 45 ರನ್ ಗಳಿಸಿದರೆ ಜಡೇಜ 13 ಎಸೆತಗಳಿಂದ 33 ರನ್ ಬಾರಿಸಿ ಅಜೇಯರಾಗಿ ಉಳಿದರು. 18 ಓವರ್ ತನಕ ಬೌಲಿಂಗ್ ಹಿಡಿತ ಸಾಧಿಸಿದ ಡೆಲ್ಲಿ ಬೌಲರ್‌ಗಳು ಅಂತಿಮ ಎರಡು ಓವರ್‌ನಲ್ಲಿ 32 ರನ್ ಬಿಟ್ಟುಕೊಟ್ಟು ಹಳಿ ತಪ್ಪಿದವರಂತೆ ಗೋಚರಿಸಿದರು.
ಸಂಕ್ಷಿಪ್ತ ಸ್ಕೋರ್: ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟಿಗೆ 179 (ಫಾ ಡು ಪ್ಲೆಸಿಸ್ 58, ರಾಯುಡು ಅಜೇಯ 45, ವಾಟ್ಸನ್ 36, ಜಡೇಜ ಅಜೇಯ 33, ನೋರ್ಜೆ 44ಕ್ಕೆ 2)