Advertisement

ಡೆಲ್ಲಿಗೆ ಚೆನ್ನೈ ಚಾಲೆಂಜ್: ಟಾಸ್ ಗೆದ್ದ ಧೋನಿ ಪಡೆ ಬ್ಯಾಟಿಂಗ್ ಆಯ್ಕೆ

07:05 PM Oct 17, 2020 | Mithun PG |

ಶಾರ್ಜಾ: ಸತತ ಗೆಲುವಿನ ಉತ್ಸಾಹದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಜಯದ ಹಳಿಗೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿಯಾಗುತ್ತಿದ್ದು. ಟಾಸ್ ಗೆದ್ದ ಧೋನಿ   ಪಡೆ, ಬ್ಯಾಟಿಂಗ್  ಆಯ್ದುಕೊಂಡಿದ್ದಾರೆ.

Advertisement

ಈಗಾಗಲೇ ಚೆನ್ನೈ ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಸೋಲು ಕಂಡಿದ್ದು, ಮುಂದಿನ 6 ಪಂದ್ಯಗಳಲ್ಲಿ ಕನಿಷ್ಟ 5ರಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಮತ್ತೊಂದೆಡೆ ಡೆಲ್ಲಿ ತಂಡ ಬಲಿಷ್ಟವಾಗಿದೆ. ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದಾರೆ. ಈಗಾಗಲೇ ಪಂದ್ಯದಿಂದ ರಿಷಬ್ ಪಂತ್ ಹೊರಗುಳಿದಿದ್ದಾರೆ. ಧವನ್, ಪೃಥ್ವಿ, ಸ್ಟೋಯ್ನಿಸ್  ಆರ್ಭಟಿಸಿದರೆ ಪಂದ್ಯ ಗೆಲ್ಲುವುದು ನಿಶ್ಚಿತ

ಇತ್ತಂಡಗಳು 22 ಬಾರಿ ಮುಖಾಮುಖಿಯಾಗಿದ್ದು 15ರಲ್ಲಿ ಚೆನ್ನೈ ಮತ್ತು 7ರಲ್ಲಿ ಡೆಲ್ಲಿ ಜಯಗಳಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ಸನಾಯಕ), ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕ್ಯಾರಿ , ಆಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ತುಷಾರ್ ದೇಶಪಾಂಡೆ, ಕಗಿಸೊ ರಬಡಾ, ಅನ್ರಿಚ್ ನೋರ್ತ್ ಜೆ.

Advertisement

ಚೆನ್ನೈ ಸೂಪರ್ ಕಿಂಗ್ಸ್: ಫಾಫ್ ಡು ಪ್ಲೆಸಿಸ್, ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ನಾಯಕ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಡ್ವೇನ್ ಬ್ರಾವೋ, ದೀಪಕ್ ಚಹರ್, ಶಾರ್ದುಲ್ ಠಾಕೂರ್, ಕರ್ನ್ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next