Advertisement

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದೆಹಲಿ ತಂಡ ಭೇಟಿ

01:02 PM Aug 03, 2018 | |

ಮುದ್ದೇಬಿಹಾಳ: ಇಲ್ಲಿನ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ಮೂಲ ಸೌಕರ್ಯ ಮತ್ತು
ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಕೇಂದ್ರ ಸರ್ಕಾರದ ಜನಸಂಖ್ಯಾ ಸಂಶೋಧನಾ ಕೇಂದ್ರದ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ವಿಜಯಪುರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳನ್ನು ರ್‍ಯಾಂಕಿಂಗ್‌ಗೆ ಆಯ್ಕೆ ಮಾಡುವ ಹಿನ್ನೆಲೆ 2017-18ನೇ
ಸಾಲಿನ ಆರೋಗ್ಯ ಮಾಹಿತಿ ಉಸ್ತುವಾರಿ ವ್ಯವಸ್ಥೆಯಲ್ಲಿ ನೀಡಿದ ಮಾಹಿತಿಗಳನ್ನು ಪರಿಶೀಲಿಸಲು ಆಗಮಸಿದ್ದ
ತಂಡದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜನಸಂಖ್ಯಾ ತಜ್ಞ ಬಸವರಾಜ ಪುರದಪ್ಪನವರ್‌, ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಉಪ
ನಿರ್ದೇಶಕ ಅಶೋಕ ಪಾಟೀಲ, ವ್ಯವಸ್ಥಾಪಕ ರಘುನಾಥನ್‌ ಇದ್ದರು.

ಆಸ್ಪತ್ರೆಯಲ್ಲಿ ರೋಗಿಗಳ ದಾಖಲಾತಿ ವರದಿ, ಆಸ್ಪತ್ರೆಯ ಮೂಲ ಸೌಕರ್ಯ, ಕಂಪ್ಯೂಟರ್‌, ಇಂಟರ್ನೆಟ್‌ ಸೌಕರ್ಯ,
ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ನೀಡುತ್ತಿರುವ ಸೇವೆ ಮುಂತಾದವುಗಳ ಮಾಹಿತಿ ಸಂಗ್ರಹಿಸಿದ ತಂಡ ತಾಲೂಕು
ಆರೋಗ್ಯಾ ಧಿಕಾರಿಗಳ ಕಚೇರಿಗೂ ಭೇಟಿ ನೀಡಿ ಅಗತ್ಯ ಮಾಹಿತಿ ಕಲೆಹಾಕಿತು. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಪ್ರಭಾರ ಆಡಳಿತ ಹೊಂದಿರುವ ಬಸವನ ಬಾಗೇವಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಎಸ್‌.ಎಲ್‌.ಲಕ್ಕಣ್ಣವರ್‌ ತಂಡಕ್ಕೆ ಅಗತ್ಯ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next