Advertisement

ಗೆಲುವಿಗಾಗಿ ಡೆಲ್ಲಿ-ರಾಜಸ್ಥಾನ ಪ್ರಯತ್ನ

07:00 AM Apr 11, 2018 | Team Udayavani |

ಜೈಪುರ: ಮೊದಲ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಭಾರೀ ಅಂತರದ ಸೋಲು ಕಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡವು ಬುಧವಾರದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವನ್ನು ಎದುರಿಸಲಿದೆ. ಡೆಲ್ಲಿ ತಂಡವು ಆರಂಭಿಕ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಸೋತಿತ್ತು. ಹಾಗಾಗಿ ಮೊದಲ ಗೆಲುವಿಗಾಗಿ ಡೆಲ್ಲಿ ಮತ್ತು ರಾಜಸ್ಥಾನ ಪ್ರಯತ್ನಿಸಲಿದೆ. ತವರಿನಲ್ಲಿ ನಡೆಯುವ ಕಾರಣ ರಾಜಸ್ಥಾನಕ್ಕೆ ಹೆಚ್ಚಿನ ಒತ್ತಡವಿದೆ.

Advertisement

ರಾಹುಲ್‌ ಅವರ ವೇಗದ ಅರ್ಧಶತಕದಿಂದಾಗಿ ಡೆಲ್ಲಿ ತಂಡ ಪಂಜಾಬ್‌ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿದ್ದರೆ ರಾಜಸ್ಥಾನ ತಂಡವು 9 ವಿಕೆಟ್‌ಗಳಿಂದ ಶರಣಾಗಿತ್ತು. ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ಮರಳಿದ್ದ ರಾಜಸ್ಥಾನಕ್ಕೆ ಈ ಸೋಲು ದೊಡ್ಡ ಹೊಡೆತ ನೀಡಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡುವ ಮೂಲಕ ಇದನ್ನು ಮರೆಯಲು ಪ್ರಯತ್ನಿಸಬೇಕಾಗಿದೆ. ಸ್ವತಃ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಂಡಿರುವುದು ಚಿಂತೆಯಾಗಿದೆ. ಸ್ಟೀವನ್‌ ಸ್ಮಿತ್‌ ಅವರ ಅನುಪಸ್ಥಿತಿಯೂ ತಂಡದ ಹಿನ್ನೆಡೆಗೆ ಕಾರಣವಾಗಿದೆ. ಸಂಜು ಸ್ಯಾಮ್ಸನ್‌ ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ. 

ರಾಜಸ್ಥಾನಕ್ಕೆ ಹೋಲಿಸಿದರೆ ಡೆಲ್ಲಿ ಸ್ವಲ್ಪಮಟ್ಟಿಗೆ ಬಲಿಷ್ಠವೆಂದು ಹೇಳಬಹುದು. ಪಂಜಾಬ್‌ ವಿರುದ್ಧ ಡೆಲ್ಲಿ ಉತ್ತಮ ಹೋರಾಟ ಸಂಘಟಿಸಿತ್ತು. ಆದರೆ ರಾಹುಲ್‌ ಅವರ ವೇಗದ ಅರ್ಧಶತಕದಿಂದ ಡೆಲ್ಲಿಯ ಲೆಕ್ಕಾಚಾರ ಅಡಿಮೇಲಾಗಿತ್ತು. ಗೌತಮ್‌ ಗಂಭೀರ್‌, ರಿಷಬ್‌ ಪಂತ್‌, ಮೊರಿಸ್‌ ಉತ್ತಮ ನಿರ್ವಹಣೆ ನೀಡಿದ್ದರೆ ಬೌಲಿಂಗ್‌ನಲ್ಲಿ ಬೌಲ್ಟ್, ಮೊಹಮ್ಮದ್‌ ಶಮಿ, ಮೊರಿಸ್‌ ಮತ್ತು ಅಮಿತ್‌ ಮಿಶ್ರಾ ಇದ್ದಾರೆ. ನಾಯಕರಾಗಿ ಗಂಭೀರ್‌ ಇರುವುದು ಡೆಲ್ಲಿಗೆ ಆನೆಬಲ ಬಂದಂತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next