Advertisement

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

08:41 AM May 05, 2024 | Team Udayavani |

ನವದೆಹಲಿ: ಬ್ಯಾಟರ್‌ಗಳ ಭರಾಟೆ ಹೆಚ್ಚುತ್ತಿರುವ ಈ ಆಧುನಿಕ ಕ್ರಿಕೆಟ್‌ ದಿನಗಳಲ್ಲಿ ಮೈದಾನಗಳ ಗಾತ್ರ ಅಪ್ರಸ್ತುತವೆನಿಸುತ್ತಿದೆ ಎಂದು ಅನುಭವಿ ಆಫ್ ಸ್ಪಿನ್ನರ್‌ ಆರ್‌.ಅಶ್ವಿ‌ನ್‌ ಹೇಳಿದ್ದಾರೆ.

Advertisement

ಕ್ರಿಕೆಟ್‌ನಲ್ಲಿ ಪವರ್‌ ಹಿಟ್ಟಿಂಗ್‌ ಬೆಳೆಯುತ್ತಿರುವುದು ಮೈದಾನದ ಗಾತ್ರವನ್ನು ಅಪ್ರಸ್ತುತವೆನಿಸುತ್ತಿದೆ ಎಂದಿರುವ ಅವರು, ಟಿ20 ಪಂದ್ಯಗಳು ಒನ್‌ ಸೈಡೆಡ್‌ ಗೇಮ್‌ ಗಳಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡ 277 ಮತ್ತು 287 ಟೋಟಲ್‌ ಬಾರಿಸಿ, 2013ರಲ್ಲಿ ಅತ್ಯಧಿಕ ಟೋಟಲ್‌ ಆಗಿ ಆರ್‌ಸಿಬಿ ನಿರ್ಮಿಸಿದ್ದ 263 ರನ್‌ಗಳ ದಾಖಲೆಯನ್ನು 2 ಬಾರಿ ಮುರಿದಿತ್ತು. ಅಲ್ಲದೆ, ಕೋಲ್ಕತಾ ಕೂಡ 272 ರನ್‌ ಬಾರಿಸಿತ್ತು. ಇಂಪ್ಯಾಕ್ಟ್ ಪ್ಲೇಯರ್‌ನಿಯಮದಿಂದಾಗಿ ಈ ದಿನಗಳಲ್ಲಿ 250 ಟೋಟಲ್‌ ಕೂಡ ಸವಾಲಿನದ್ದೆನಿಸುತ್ತಿಲ್ಲ. ಇದೇ ವಿಚಾರವಾಗಿ ಅಶ್ವಿ‌ನ್‌ ಮಾತನಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಶ್ವಿ‌ನ್‌, ಹಿಂದಿನ ದಿನಗಳಲ್ಲಿ ನಿರ್ಮಿಸಲಾಗಿದ್ದ ಕ್ರೀಡಾಂಗಣಗಳು ಈಗ ಅಪ್ರಸ್ತುತವಾಗುತ್ತಿವೆ. ಆಗ ಬಳಸಲಾಗುತ್ತಿದ್ದ ಬ್ಯಾಟ್‌ಗಳನ್ನು ಗಲ್ಲಿ ಕ್ರಿಕೆಟ್‌ಗೂ ಬಳಸಲಾಗುತ್ತಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next