Advertisement

IPL 2024: ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ ರೋಚಕ ಜಯ

01:37 AM Apr 11, 2024 | Team Udayavani |

ಜೈಪುರ: ನಾಯಕ ಶುಭ್‌ಮನ್‌ ಗಿಲ್‌ ಸಹಿತ ಎಲ್ಲ ಆಟಗಾರರ ಸಮಯೋಚಿತ ಆಟದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ ತಂಡವು ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಅಜೇಯ ಖ್ಯಾತಿಯ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿದೆ. ಇದು ಆಡಿದ ಐದು ಪಂದ್ಯಗಳಲ್ಲಿ ರಾಜಸ್ಥಾನ್‌ ತಂಡಕ್ಕೆ ಎದುರಾದ ಮೊದಲ ಸೋಲು ಆಗಿದೆ.

Advertisement

ಸಂಜು ಸ್ಯಾಮ್ಸನ್‌ ಮತ್ತು ರಿಯಾನ್‌ ಪರಾಗ್‌ ಅವರ ಅರ್ಧಶತಕದಿಂದಾಗಿ ರಾಜಸ್ಥಾನ್‌ ರಾಯಲ್ಸ್‌ ತಂಡವು 3 ವಿಕೆಟಿಗೆ 196 ರನ್‌ ಗಳಿಸಿದ್ದರೆ ಗುಜರಾತ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟಿಗೆ 199 ರನ್‌ ಗಳಿಸಿ ಜಯ ಸಾಧಿಸಿತು.

ಇನ್ನಿಂಗ್ಸ್‌ ಆರಂಭಿಸಿದ ಸಾಯಿ ಸುದರ್ಶನ್‌ ಮತ್ತು ಶುಭ್‌ಮನ್‌ ಗಿಲ್‌ ಮೊದಲ ವಿಕೆಟಿಗೆ64 ರನ್ನುಗಳ ಜತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ತಂಡ ಸ್ವಲ್ಪಮಟ್ಟಿಗೆ ಕುಸಿತ ಕಂಡರೂ ಕೊನೆ ಹಂತದಲ್ಲಿ ತೆವಾಟಿಯ, ಶಾರೂಖ್‌ ಮತ್ತು ರಶೀದ್‌ ಅವರ ಉತ್ತಮ ಆಟದಿಂದಾಗಿ ತಂಡ ಜಯಭೇರಿ ಬಾರಿಸಲು ಯಶಸ್ವಿಯಾಯಿತು. ನಾಯಕನ ಜವಾಬ್ದಾರಿ ಅರಿತು ಆಡಿದ ಗಿಲ್‌ 44 ಎಸೆತಗಳಿಂದ 72 ರನ್‌ ಗಳಿಸಿದರು.

ಸಂಜು ಸ್ಯಾಮ್ಸನ್‌ 38 ಎಸೆತಗಳಿಂದ ಅಜೇಯ 68 ರನ್‌ ಬಾರಿಸಿದರೆ (7 ಬೌಂಡರಿ, 2 ಸಿಕ್ಸರ್‌), ಅಮೋಘ ಫಾರ್ಮ್ ನಲ್ಲಿರುವ ರಿಯಾನ್‌ ಪರಾಗ್‌ 48 ಎಸೆತ ಎದುರಿಸಿ 76 ರನ್‌ ಹೊಡೆದರು. ಇದು 3 ಬೌಂಡರಿ ಹಾಗೂ 5 ಪ್ರಚಂಡ ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಅಂದಹಾಗೆ ಇದು ಸ್ಯಾಮ್ಸನ್‌ ನಾಯಕತ್ವದ 50ನೇ ಐಪಿಎಲ್‌ ಪಂದ್ಯವಾಗಿತ್ತು. ಇಲ್ಲಿ ಸರ್ವಾಧಿಕ ರನ್ನಿನ ದಾಖಲೆ ಸ್ಥಾಪಿಸಿದರು. ಹಿಂದಿನ ದಾಖಲೆ ಗೌತಮ್‌ ಗಂಭೀರ್‌ ಹೆಸರಲ್ಲಿತ್ತು. ಅವರು ನಾಯಕರಾಗಿ ಆರ್‌ಸಿಬಿ ಎದುರಿನ 2013ರ ಪಂದ್ಯದಲ್ಲಿ 59 ರನ್‌ ಹೊಡೆದಿದ್ದರು.

ಮಳೆಯಿಂದಾಗಿ ಪಂದ್ಯ ತುಸು ವಿಳಂಬವಾಗಿ ಆರಂಭವಾಗಿತ್ತು. ಟಾಸ್‌ ಗೆದ್ದ ಗುಜರಾತ್‌ ಬೌಲಿಂಗ್‌ ಆಯ್ದುಕೊಂಡರೂ ದೊಡ್ಡ ಯಶಸ್ಸು ಸಾಧಿಸಿದ್ದು ಪವರ್‌ ಪ್ಲೇಯಲ್ಲಿ ಮಾತ್ರ. ಆಗ ರಾಜಸ್ಥಾನದ ಆರಂಭಿಕರಿಬ್ಬರೂ ಪೆವಿಲಿಯನ್‌ ಸೇರಿಕೊಂಡಿದ್ದರು. 43ಕ್ಕೆ 2 ವಿಕೆಟ್‌ ಉರುಳಿತ್ತು.
ಯಶಸ್ವಿ ಜೈಸ್ವಾಲ್‌ ದೊಡ್ಡ ಮೊತ್ತ ದಾಖಲಿಸಲು ಮತ್ತೆ ವಿಫ‌ಲರಾದರು. 19 ಎಸೆತಗಳಿಂದ 24 ರನ್‌ (5 ಬೌಂಡರಿ) ಮಾಡಿದ ಅವರು ಉಮೇಶ್‌ ಯಾದವ್‌ ಎಸೆತದಲ್ಲಿ ವಿಕೆಟ್‌ ಕೀಪರ್‌ ಮ್ಯಾಥ್ಯೂ ವೇಡ್‌ಗೆ ಕ್ಯಾಚ್‌ ನೀಡಿ ವಾಪಸಾದರು. ಆರ್‌ಸಿಬಿ ವಿರುದ್ಧ ಶತಕ ಬಾರಿಸಿದ್ದ ಜಾಸ್‌ ಬಟ್ಲರ್‌ ಇಲ್ಲಿ ಎಂಟರ ಗಡಿ ದಾಟಲಿಲ್ಲ. ಈ ವಿಕೆಟ್‌ ರಶೀದ್‌ ಪಾಲಾಯಿತು.

Advertisement

ಸ್ಕೋರ್‌ ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌
ಯಶಸ್ವಿ ಜೈಸ್ವಾಲ್‌ ಸಿ ವೇಡ್‌ ಬಿ ಉಮೇಶ್‌ 24
ಜಾಸ್‌ ಬಟ್ಲರ್‌ ಸಿ ತೆವಾಟಿಯ ಬಿ ರಶೀದ್‌ 8
ಸಂಜು ಸ್ಯಾಮ್ಸನ್‌ ಔಟಾಗದೆ 68
ರಿಯಾನ್‌ ಪರಾಗ್‌ ಸಿ ಶಂಕರ್‌ ಬಿ ಮೋಹಿತ್‌ 76
ಶಿಮ್ರನ್‌ ಹೆಟ್‌ಮೈರ್‌ ಔಟಾಗದೆ 13
ಇತರ 7
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 196
ವಿಕೆಟ್‌ ಪತನ: 1-32, 2-42, 3-172.
ಬೌಲಿಂಗ್‌: ಉಮೇಶ್‌ ಯಾದವ್‌ 4-0-47-1
ಸ್ಪೆನ್ಸರ್‌ ಜಾನ್ಸನ್‌ 4-0-37-0
ರಶೀದ್‌ ಖಾನ್‌ 4-0-18-1
ನೂರ್‌ ಅಹ್ಮದ್‌ 4-0-43-0
ಮೋಹಿತ್‌ ಶರ್ಮ 4-0-51-1

ಗುಜರಾತ್‌ ಟೈಟಾನ್ಸ್‌
ಸಾಯಿ ಸುದರ್ಶನ್‌ ಎಲ್‌ಬಿಡಬ್ಲ್ಯು ಬಿ ಸೆನ್‌ 35
ಶುಭ್‌ಮನ್‌ ಗಿಲ್‌ ಸ್ಟಂಪ್ಡ್ ಸ್ಯಾಮ್ಸನ್‌ ಬಿ ಚಹಲ್‌ 72
ಮ್ಯಾಥ್ಯೂ ವೇಡ್‌ ಬಿ ಸೆನ್‌ 4
ಅಭಿನವ್‌ ಮನೋಹರ್‌ ಬಿ ಸೆನ್‌ 1
ವಿಜಯ್‌ ಶಂಕರ್‌ ಬಿ ಚಹಲ್‌ 16
ರಾಹುಲ್‌ ತೆವಾಟಿಯ ರನೌಟ್‌ 22
ಶಾರೂಖ್‌ ಖಾನ್‌ ಎಲ್‌ಬಿಡಬ್ಲ್ಯು ಬಿ ಆವೇಶ್‌ 14
ರಶೀದ್‌ ಖಾನ್‌ ಔಟಾಗದೆ 24
ನೂರ್‌ ಅಹ್ಮದ್‌ ಔಟಾಗದೆ 0
ಇತರ: 11
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 199
ವಿಕೆಟ್‌ ಪತನ: 1-64, 2-77, 3-79, 4-111, 5-133, 6-157, 7-195
ಬೌಲಿಂಗ್‌: ಟ್ರೆಂಟ್‌ ಬೌಲ್ಟ್ 2-0-8-0
ಆವೇಶ್‌ ಖಾನ್‌ 4-0-48-1
ಕೇಶವ ಮಹಾರಾಜ್‌ 2-0-16-0
ಆರ್‌. ಅಶ್ವಿ‌ನ್‌ 4-0-40-0
ಯಜುವೇಂದ್ರ ಚಹಲ್‌ 4-0-43-2
ಕುಲದೀಪ್‌ ಸೆನ್‌ 4-0-41-3

ಪಂದ್ಯಶ್ರೇಷ್ಠ: ರಶೀದ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next