Advertisement

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

09:46 PM Apr 23, 2024 | Team Udayavani |

ಕೋಲ್ಕತ: ವೆಸ್ಟ್‌ ಇಂಡೀಸ್‌ನ ಮಾಜಿ ಆಲ್‌ರೌಂಡರ್‌, ಮಿಸ್ಟರಿ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ ಖಡಕ್‌ ನಿರ್ಧಾರವೊಂದಕ್ಕೆ ಬಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ಹಿಂಪಡೆದು, ಮುಂದಿನ ಟಿ20 ವಿಶ್ವಕಪ್‌ನಲ್ಲಿ ಆಡುವ ಪ್ರಶ್ನೆಯೇ ಇಲ್ಲ, ಅದು ಮುಗಿದ ವಿಚಾರ ಎಂದು ಎಂದಿದ್ದಾರೆ.

Advertisement

ಸುನೀಲ್‌ ನಾರಾಯಣ್‌ ಅವರ ಕಳೆದೊಂದು ವರ್ಷದ ಟಿ20 ಲೀಗ್‌ ಹಾಗೂ ಈ ಬಾರಿಯ ಐಪಿಎಲ್‌ ಫಾರ್ಮ್ ಗಮನಿಸಿದ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರನೇಕರು ಭಾರೀ ಪ್ರಭಾವಿತರಾಗಿದ್ದಾರೆ. ಹೀಗಾಗಿ ಅವರು ನಿವೃತ್ತಿಯಿಂದ ಹಿಂದೆ ಸರಿದು, ತಮ್ಮಲ್ಲೇ ನಡೆಯುವ ಟಿ20 ವಿಶ್ವಕಪ್‌ ಆಡಿದ್ದೇ ಆದಲ್ಲಿ ವೆಸ್ಟ್‌ ಇಂಡೀಸ್‌ಗೆ ಖಂಡಿತ ಲಾಭವಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ತಂಡದ ನಾಯಕ ರೋವ¾ನ್‌ ಪೊವೆಲ್‌ ಈಗಾಗಲೇ ನಾರಾಯಣ್‌ ಅವರಲ್ಲಿ ಈ ಕುರಿತು ವಿನಂತಿ ಮಾಡಿಕೊಂಡಿದ್ದಾರೆ. ನಿಕೋಲಸ್‌ ಪೂರನ್‌, ಮಾಜಿಗಳಾದ ಕೈರನ್‌ ಪೊಲಾರ್ಡ್‌, ಡ್ವೇನ್‌ ಬ್ರಾವೋ ಮೊದಲಾದವರೂ ಒತ್ತಾಯ ಮಾಡಿದ್ದಾರೆ. ಆದರೆ ಸುನೀಲ್‌ ನಾರಾಯಣ್‌ ಇದಕ್ಕೆ ಸ್ಪಂದಿಸಿರಲಿಲ್ಲ. ಮೊದಲ ಸಲ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

“ನಾನು ನಿವೃತ್ತಿಯ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಟಿ20 ವಿಶ್ವಕಪ್‌ನಲ್ಲಿ ಆಡಲು ಕಳೆದ ಅನೇಕ ತಿಂಗಳಿಂದ ವೆಸ್ಟ್‌ ಇಂಡೀಸ್‌ ಹುಡುಗರು ಕಷ್ಟಪಟ್ಟಿದ್ದಾರೆ. ಇವರು ಕಪ್‌ ಗೆಲ್ಲಿಸಿಕೊಡಲು ಖಂಡಿತ ಸಮರ್ಥರಿದ್ದಾರೆ. ಹೀಗಾಗಿ ಇವರ ಅವಕಾಶವನ್ನು ನಾನು ಕಿತ್ತುಕೊಳ್ಳುವುದು ಸರಿಯಲ್ಲ. ತಂಡಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ಸುನೀಲ್‌ ನಾರಾಯಣ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next