Advertisement

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

09:05 PM Apr 27, 2024 | Team Udayavani |

ಹೊಸದಿಲ್ಲಿ: ಇಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಪವರ್-ಹಿಟ್ಟಿಂಗ್ ಮಾಸ್ಟರ್ ಕ್ಲಾಸ್ ಆಟದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್‌ಗಳ ಜಯದೊಂದಿಗೆ ಐಪಿಎಲ್ ಪ್ಲೇ-ಆಫ್‌ ರೇಸ್‌ನಲ್ಲಿ ತಮ್ಮನ್ನು ಕಾಯ್ದುಕೊಂಡಿದೆ.

Advertisement

ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸ್ಪೋಟಕ ಹೊಡೆತದ ಪರಾಕ್ರಮ ಮೆರೆದ ಯುವ ಆಟಗಾರ ಮೆಕ್‌ಗುರ್ಕ್ ಅವರು 27 ಎಸೆತಗಳಲ್ಲಿ 84 ರನ್‌ಗಳೊಂದಿಗೆ ಮಿಂಚಿದರು. ಡೆಲ್ಲಿ ನಾಲ್ಕು ವಿಕೆಟ್‌ಗಳಿಗೆ 257 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಮೆಕ್‌ಗುರ್ಕ್ ಮಿಂಚಿದ ವೇಳೆ ಟ್ರಿಸ್ಟನ್ ಸ್ಟಬ್ಸ್ ಡೆತ್ ಓವರ್‌ಗಳಲ್ಲಿ 25 ಎಸೆತಗಳಲ್ಲಿ ಅಜೇಯ 48 ರನ್‌ಗಳೊಂದಿಗೆ ಬೆರಗು ಮೂಡಿಸಿದರು, ಡೆಲ್ಲಿ ಐಪಿಎಲ್‌ನಲ್ಲಿ ಅತ್ಯಧಿಕ ಸ್ಕೋರ್ ದಾಖಲಿಸಲು ಅತ್ಯುತ್ತಮ ಬ್ಯಾಟಿಂಗ್ ಕೊಡುಗೆ ನೀಡಿದರು. ಅಭಿಷೇಕ್ ಪೊರೆಲ್ 36, ಶಾಯ್ ಹೋಪ್ 41,ನಾಯಕ ಪಂತ್ 29 ರನ್, ಅಕ್ಷರ್ ಔಟಾಗದೆ 11 ಕೊಡುಗೆ ನೀಡಿದರು.

ಗುರಿ ಬೆನ್ನಟ್ಟಿದ ಮುಂಬೈ ಪರ ತಿಲಕ್ ವರ್ಮ (63) ಮತ್ತು ಹಾರ್ದಿಕ್ ಪಾಂಡ್ಯ (46) ಭರವಸೆಯನ್ನು ಮೂಡಿಸಿದರಾದರೂ ಇಂಪ್ಯಾಕ್ಟ್ ಪ್ಲೇಯರ್ ರಾಸಿಖ್ ಸಲಾಮ್ 3 ವಿಕೆಟ್ ಕಿತ್ತು ನಿಯಂತ್ರಿಸಿದರು. ಡೆಲ್ಲಿ ಬೌಲರ್‌ಗಳು ಮುಂಬೈ ತಂಡವನ್ನು 9 ವಿಕೆಟ್‌ಗೆ 247 ಕ್ಕೆ ನಿಲ್ಲಿಸಿದರು. ಮುಖೇಶ್ ಕುಮಾರ್ 3, ಖಲೀಲ್ ಅಹ್ಮದ್ 2 ವಿಕೆಟ್ ಪಡೆದರು. ಇಶಾನ್ ಕಿಶನ್ 20, ರೋಹಿತ್ ಶರ್ಮ 8, ಸೂರ್ಯಕುಮಾರ್ 26 ರನ್ ಗಳಿಗೆ ನಿರ್ಗಮಿಸಿದರು. ಕೊನೆಯಲ್ಲಿ ಟಿಮ್ ಡೇವಿಡ್ 37 ರನ್ ಗಳಿಸಿ ಭರವಸೆ ಮೂಡಿಸಿದರು ಆದರೆ ಅವರನ್ನು ಮುಖೇಶ್ ಕುಮಾರ್ ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು. ಪಿಯೂಷ್ ಚಾವ್ಲಾ10, ಮೊಹಮ್ಮದ್ ನಬಿ 7 ರನ್ , ಲ್ಯೂಕ್ ವುಡ್ ಔಟಾಗದೆ 9 ರನ್ ಗಳಿಸಿ ಹೋರಾಟ ನೀಡಿದರೂ ಮುಂಬೈಗೆ ಸೋಲನ್ನು ಒಪ್ಪಿಕೊಳ್ಳಲೇ ಬೇಕಾಯಿತು.

ಗೆಲುವಿನಿಂದ ಡೆಲ್ಲಿ ಐದನೇ ಸ್ಥಾನಕ್ಕೆ ಏರಿದರೆ ಮುಂಬೈ 9 ನೇ ಪಂದ್ಯದಲ್ಲಿ 6ನೇ ಸೋಲು ಕಂಡು ಕೆಳಗುಳಿದು ಸವಾಲೆದುರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next