Advertisement

Malayalam Actor: ಶ್ವಾಸಕೋಶದ ಕಾಯಿಲೆ; ಖ್ಯಾತ ನಟ ಮೇಘನಾಥನ್‌ ನಿಧನ

11:19 AM Nov 21, 2024 | Team Udayavani |

ತಿರುವನಂತಪುರಂ: ಮಾಲಿವುಡ್‌ ಚಿತ್ರರಂಗದ ಖ್ಯಾತ ನಟ ಮೇಘನಾಥನ್ (Malayalam actor Meghanathan) ನಿಧನರಾಗಿದ್ದಾರೆ.

Advertisement

ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೇಘನಾಥನ್ (60) ಗುರುವಾರ (ನ.21ರಂದು)  ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೇಘನಾಥನ್ ಹಿರಿಯ ನಟ ಬಾಲನ್ ಕೆ ನಾಯರ್ ಅವರ ಮೂರನೇ ಪುತ್ರರಾಗಿದ್ದರು, ಚೆನ್ನೈನಲ್ಲಿ ಬಾಲ್ಯದ ದಿನಗಳನ್ನು ಕಳೆದ ಅವರು ಅಲ್ಲೇ ಶಿಕ್ಷಣವನ್ನು ಮುಗಿಸಿದರು. ತಂದೆ ಹಾದಿಯನ್ನು ಹಿಡಿದು ಅವರು ಚಿತ್ರರಂಗಕ್ಕೆ ಕಾಲಿಟ್ಟರು.

ʼಅಸ್ತ್ರಮ್ʼ ಸಿನಿಮಾದ ಮೂಲಕ 1983ರಲ್ಲಿ ಚಿತ್ರರಂಗಕ್ಕೆ ಅವರು ಕಾಲಿಟ್ಟರು. 30 ದಶಕಕ್ಕೂ ಹೆಚ್ಚಿನ ಕಾಲ ಚಿತ್ರರಂಗದಲ್ಲಿ ಕಾಣಿಸಿಕೊಂಡ ಅವರು, 50ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಾನಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Advertisement

ʼಪಂಚಾಗ್ನಿʼ, ʼಚಮಯಂʼ, ʼರಾಜಧಾನಿʼ, ʼಭೂಮಿಗೀತಂʼ, ʼಚೆಂಕೋಲ್ʼ, ಮಲಪ್ಪುರಂ ಹಾಜಿ ಮಹಾನಯ ಜೋಜಿ, ʼಪ್ರಯಿಕ್ಕರ ಪಪ್ಪನ್ʼ, ʼಉದ್ಯಾನಪಾಲಕಂʼ, ʼಈ ಪೂಜಯುಂʼ, ʼಕಡನ್ನುʼ, ʼವಾಸ್ತವಂʼ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಮೇಘನಾಥನ್ ಪತ್ನಿ ಸುಶ್ಮಿತಾ, ಪುತ್ರಿ ಪಾರ್ವತಿ ಅವರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next