Advertisement

ಪಿಎಂಒಗೆ ಗಾಳಿ ಶುದ್ಧೀಕರಣ ಯಂತ್ರ 

07:30 AM Mar 21, 2018 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯು ಮಾಲಿನ್ಯ ಮಿತಿಮೀರಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿ ಸೇರಿದಂತೆ ಕೇಂದ್ರ ಸರಕಾರ ಪ್ರಮುಖ ಕಚೇರಿಗಳಿಗಾಗಿ 100 ಏರ್‌ ಪ್ಯೂರಿಫೈಯರ್‌ (ಗಾಳಿ ಶುದ್ಧೀಕರಣ ಯಂತ್ರ)ಗಳನ್ನು ಖರೀದಿಸಲಾಗಿದೆ. ಸರಕಾರದ ಮಾಹಿತಿಯ ಪ್ರಕಾರ, ಒಟ್ಟು 140 ಏರ್‌ ಪ್ಯೂರಿಫೈಯರ್‌ಗಳನ್ನು ಖರೀದಿಸಲಾಗಿದ್ದು, ಇವುಗಳಲ್ಲಿ ಬಹುತೇಕ ಪ್ರಧಾನಿ ಕಚೇರಿಗಾಗಿ ಬಳಕೆಯಾಗಲಿವೆ. 6 ಯಂತ್ರಗಳನ್ನು ಕೆಲ ಸರ್ಕಾರಿ ಸಂಸ್ಥೆಗಳಿಗೆ ನೀಡಲಾಗುತ್ತದೆ. ಕಳೆದ ವರ್ಷ ನಡೆಸಲಾಗಿದ್ದ ಕೆಲ ಸಮೀಕ್ಷಾ ವರದಿಗಳಲ್ಲಿ ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲೊಂದು ಎಂಬ ಕುಖ್ಯಾತಿ ಪಡೆದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next