Advertisement

ದೆಹಲಿ ಕರ್ನಾಟಕ ಸಂಘ: ಕರ್ನಾಟಕ ರಾಜ್ಯೋತ್ಸವ ಆಚರಣೆ

12:28 PM Dec 04, 2018 | |

ಮುಂಬಯಿ: ಹೊರನಾಡ ಕನ್ನಡಿಗರಾದ ನಾವು ಕರ್ನಾಟಕದಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗು ತ್ತಿದ್ದೇವೆ. ಸಿಇಟಿ  ಪರೀಕ್ಷೆ ಬರೆಯಲು ಹೊರನಾಡ ಕನ್ನಡಿಗರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಆ ಸೌಲಭ್ಯಗಳನ್ನು ಪಡೆಯಲು ದೆಹಲಿ ಕರ್ನಾಟಕ ಸಂಘವು ಒಂದು ವೇದಿಕೆ ಯಾಗಿ ಕರ್ನಾಟಕ ಸರಕಾರದ ಜತೆಗೆ ಕೆಲಸ ಮಾಡಬೇಕು ಎಂದು ಭಾರತ ಸರಕಾರದ ಮಾನವ ಸಂಪ ನ್ಮೂಲ ಸಚಿವಾಲಯದಲ್ಲಿ ಜಂಟಿ ಕಾರ್ಯ ದರ್ಶಿ ಗಿರೀಶ್‌ ಹೊಸೂರು ಅವರು ನುಡಿದರು.

Advertisement

ನ. 25ರಂದು ದೆಹಲಿ ಕರ್ನಾಟಕ ಸಂಘದ ವತಿಯಿಂದ ಸಂಘದ ಸಭಾಗೃಹದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೆಹಲಿ ಕರ್ನಾಟಕ ಸಂಘವು ಪ್ರತಿ ವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು, ಸಾಂಸ್ಕೃತಿಕ ಕಾರ್ಯಕ್ರಮಗಳ ಹೊರತಾಗಿ ವಿದ್ಯಾರ್ಥಿ ವೇತನ ನೀಡುವುದು, ಆಟೋಟ ಸ್ಪರ್ಧೆಗಳ ಆಯೋಜನೆ ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನವ ದೆಹಲಿಯ ದೂರದರ್ಶನ ಕಿಸಾನ್‌ ಚಾನಲ್‌ ಉಪ ಮಹಾನಿರ್ದೇಶಕರಾದ ಎನ್‌. ಚಂದ್ರಶೇಖರ್‌ ಅವರು ಮಾತ ನಾಡಿ, ದೆಹಲಿ ಕರ್ನಾಟಕ ಸಂಘವು ಕರ್ನಾಟಕದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಕರ್ನಾಟಕದ ಕಲೆ, ಸಂಸ್ಕೃತಿಯನ್ನು ಪಸರಿಸುವಂತಹ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಕೊಂಡಾಡಿದರು.

ಎನ್‌.ಎ. ಮಾಧವ, ಶ್ರೀಮತಿ ಶಾಲನ್‌ ಮುರಗೋಡ ಮತ್ತು  ಕೆ. ಟಿ. ಗಣೇಶ್‌ಅವರಿಗೆ ವಿಶಿಷ್ಟ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಅಭಿನಂದಿಸ ಲಾಯಿತು. ಇದೇ ಸಂದರ್ಭದಲ್ಲಿ ಕೇಂದ್ರ ಜವಳಿ ಮಂತ್ರಾಲಯದಿಂದ ಚಿತ್ರಕಲೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ  ಸುಧೀರ್‌ ಫಡ್ನಿàಸ್‌ ಹಾಗೂ ರಂಗಕರ್ಮಿ ಪಿ. ಡಿ. ವಲ್ಸನ್‌ ಅವರನ್ನು ಅಭಿನಂದಿಸಲಾಯಿತು.

ವಿಶಿಷ್ಟ ಕನ್ನಡಿಗ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಎನ್‌. ಎ. ಮಾಧವ ಅವರು ನಮ್ಮನ್ನು ವಿಶಿಷ್ಟ ಕನ್ನಡಿಗರೆಂದು ಪರಿಗಣಿಸಿದ ಕಾರ್ಯಕಾರಿ ಸಮಿತಿಯ ಪದಾಧಿ ಕಾರಿಗಳು ಮತ್ತು ಸದಸ್ಯರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಅಭಿನಂದನೆಯನ್ನು ಸ್ವೀಕರಿಸಿದ ಕೆ.ಟಿ. ಗಣೇಶ್‌, ಶ್ರೀಮತಿ ಶಾಲನ್‌ ಮುರಗೋಡ್‌ ಅವರು ಕೃತಜ್ಞತೆ ಸಲ್ಲಿಸಿದರು.

Advertisement

ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡಿ, ಜೆ.ಎನ್‌.ಯು.ವಿನ ಕನ್ನಡ ಅಧ್ಯಯನ ಪೀಠಕ್ಕೆ ಯು.ಜಿ.ಸಿ.ಯಿಂದ ಖಾಯಂ ಪ್ರಾಧ್ಯಾಪಕರ ನೇಮಕ, ದೆಹಲಿ ವಿಶ್ವವಿದ್ಯಾಲಯ ತೆರವಾಗಿರುವ ಕನ್ನಡ ಅಧ್ಯಾಪಕರ ಹುದ್ದೆಗೆ ನೇಮಕ ಮತ್ತು ವಾರಣಾಸಿ ವಿಶ್ವವಿದ್ಯಾನಿಲಯ ಮುಚ್ಚಿ ಹೋಗಿರುವ ಕನ್ನಡ ಅಧ್ಯಯನ ಪೀಠವನ್ನು ಪು:ನರಾಂಭಿಸುವ ಕೆಲಸವನ್ನು ಮಾಡುವಂತೆ ಮಾನವ ಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಗಿರೀಶ್‌ ಹೊಸೂರು ಅವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಚಲನಚಿತ್ರ ನಟ ಅಂಬರೀಷ್‌ ಮತ್ತು ಮಾಜಿಕೇಂದ್ರ ಸಚಿವ ಜಾಫರ್‌ ಷರೀಫ್‌ ಅವರ ನಿಧನಕ್ಕೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಾತು.  ಕಾರ್ಯಕ್ರಮ ವನ್ನು ಪೂಜಾ ಪಿ. ರಾವ್‌ ನಿರೂಪಿಸಿ ದರು. ಪ್ರಧಾನ ಕಾರ್ಯದರ್ಶಿ  ಸಿ. ಎಂ. ನಾಗರಾಜ ಅವರು ವಂದಿಸಿದರು. ಸಂಘದ ಆಟೋಟ ಸ್ಪರ್ಧೆಗಳ ಬಹುಮಾನ ಹಾಗೂ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಘದ ಚಿಣ್ಣ ರಿಂದ ನೃತ್ಯ ವೈವಿಧ್ಯ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next