ನವದೆಹಲಿ: ಹೊಸ ಮದ್ಯ ನೀತಿಯನ್ನು ಹಿಂಪಡೆಯುವುದಾಗಿ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿಕೆ ನೀಡಿದ್ದು, ಸದ್ಯಕ್ಕೆ ಸರಕಾರದ ಮದ್ಯದಂಗಡಿಗಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ನೀಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಸರಕಾರದ ಈ ನೀತಿಯಿಂದಾಗಿ ಜುಲೈ 31ಕ್ಕೆ ಮದ್ಯ ನೀತಿ ಮುಕ್ತಾಯ ಆಗುವುದರಿಂದ ಆಗಸ್ಟ್ 1ರಿಂದ 468 ಖಾಸಗಿ ಮದ್ಯದಂಗಡಿಗಳು ಬಂದ್ ಆಗಲಿವೆ.
ಹೊಸ ಮದ್ಯ ನೀತಿಯನ್ನು ವಿರೋಧಿಸಿ ಆಪ್ ಸರಕಾರದ ವಿರುದ್ಧ ಹೋರಾಟಕ್ಕಿಳಿದ ಬಿಜೆಪಿ ವಿರುದ್ಧ ಕಿಡಿ ಕಾರಿದ ಅಬಕಾರಿ ಖಾತೆ ನಿಭಾಯಿಸುತ್ತಿರುವ ಸಿಸೋಡಿಯಾ, ಗುಜರಾತ್ ನಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ ಜನರು ಸಾವನ್ನಪ್ಪಿದ್ದಾರೆ. ಬಿಜೆಪಿಯವರು ಗುಜರಾತ್ ನ ಹಾಗೆ ಇಲ್ಲಿಯೂ ನಕಲಿ ಮದ್ಯ ಮಾರಾಟ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಸರಕಾರಿ ಮದ್ಯದ ಅಂಗಡಿಗಳಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ಅದನ್ನು ಹೊಸ ನೀತಿಯಲ್ಲಿ ನಿಲ್ಲಿಸಲಾಗಿತ್ತು ಎಂದು ಸಿಸೋಡಿಯಾ ಹೇಳಿದರು.
ಸಿಬಿಐ ಮತ್ತು ಇ ಡಿ ಬಳಸಿಕೊಂಡು ಅಬಕಾರಿ ಅಧಿಕಾರಿಗಳು ಮತ್ತು ಪರವಾನಿಗೆ ಪಡೆದವರನ್ನು ಬೆದರಿಸಲಾಗಿತ್ತು ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದರು.