ದೆಹಲಿ: ಮಾಂಸಾಹಾರಿ ಆಹಾರವನ್ನು ಆರ್ಡರ್ ಮಾಡಿದ ಜಾಗ ದೇವಸ್ಥಾನದ ಪಕ್ಕದಲ್ಲಿರುವ ಕಾರಣಕ್ಕೆ ಫುಡ್ ಡೆಲಿವೆರಿ ಏಜೆಂಟ್ ಆಹಾರವನ್ನು ಡೆಲಿವೆರಿ ಮಾಡಲು ನಿರಾಕರಿಸಿದ ಪ್ರಕರಣ ದೆಹಲಿಯಲ್ಲಿ ನಡೆದಿದೆ.
ಪ್ರತಿನಿತ್ಯ ಫುಡ್ ಡೆಲಿವೆರಿ ಕೆಲಸ ಮಾಡುವ ವ್ಯಕ್ತಿಗೆ, ಇತ್ತೀಚೆಗೆ ಮಟನ್ ಕೊರ್ಮ ನಾನ್ ಆರ್ಡರ್ ಮಾಡಿದ್ದಾರೆ. ರೆಸ್ಟೋರೆಂಟ್ ನಿಂದ ಆಹಾರವನ್ನು ಪಡೆದುಕೊಂಡು ತಲುಪಿಸಬೇಕಿರುವ ವಿಳಾಸವನ್ನು ಡೆಲಿವೆರಿ ಬಾಯ್ ನೋಡಿದ್ದಾರೆ. ಅದು ದೆಹಲಿಯ ಮಾರ್ಗಟ್ ಬಾಬಾ ಹನುಮಾನ್ ಮಂದಿರ ಆವರಣದ ವಿಳಾಸವೆಂದು ತೋರಿಸಿದೆ.
ಬಾಬಾ ಹನುಮಾನ್ ಮಂದಿರ ಪವಿತ್ರವಾದ ಜಾಗ ಅಲ್ಲಿ ಸಿಹಿಯಾದ ಪ್ರಸಾದವನ್ನು ಹಂಚುತ್ತಾರೆ. ಆ ಜಾಗಕ್ಕೆ ಇಂಥ ಮಾಂಸಾಹಾರವನ್ನು ತಲುಪಿಸಲಾರೆ ಎಂದುಕೊಂಡು ಆರ್ಡರ್ ಮಾಡಿದ ಗ್ರಾಹಕನಿಗೆ ಕರೆ ಮಾಡುತ್ತಾರೆ.
ಇಬ್ಬರ ನಡುವೆ ಇದೇ ವಿಚಾರವಾಗಿ ಸಂಭಾಷಣೆಗಳು ನಡೆಯುತ್ತದೆ. ನಿಮ್ಮ ವಿಳಾಸ ದೇವಸ್ಥಾನದ ಆವರಣದ ನಾಲ್ಕು ಗೋಡೆಗಳ ಮಧ್ಯಯಿದೆ. ದೇವಸ್ಥಾನದ ಆವರಣಕ್ಕೆ ನಾನು ಮಾಂಸಹಾರವನ್ನು ತಲುಪಿಸಲು ಆಗುವುದಿಲ್ಲ ಎಂದು ಡೆಲಿವೆರಿ ಹುಡುಗ ಗ್ರಾಹಕನ ಬಳಿ ಹೇಳುತ್ತಾರೆ. ಇದಕ್ಕೆ ಗ್ರಾಹಕ ದೇವಸ್ಥಾನ ಆವರಣದಲ್ಲಿ ನನ್ನ ಅಂಗಡಿಯಿಲ್ಲ. ದೇವಸ್ಥಾನ ಇಲ್ಲಿಂದ ಇನ್ನು 150 ಹೆಜ್ಜೆ ದೂರವಿದೆ. ನಾನು ಪ್ರತಿನಿತ್ಯ ನಿಮ್ಮ ಬಳಿಯಿಂದಲೇ ಆರ್ಡರ್ ಮಾಡುವುದು ಎಂದಿದ್ದಾರೆ. ಇದಕ್ಕೆ ಡೆಲಿವೆರಿ ಹುಡುಗ ಇಲ್ಲ ಸರ್ ದೇವಸ್ಥಾನ ನಿಮ್ಮ ಅಂಗಡಿಯ ಪಕ್ಕದಲ್ಲೇ ಇದೆ. ನಾನು ಮಾಂಸಾಹಾರವನ್ನು ದೇವಸ್ಥಾನದ ಆವರಣದೊಳಗೆ ತಲುಪಿಸಲಾರೆ ಎಂದಿದ್ದಾರೆ.
ಇದಾದ ಬಳಿಕ ಡೆಲಿವೆರಿ ಹುಡುಗ ತನ್ನ ಕೆಲಸವನ್ನು ಈ ಕಾರಣದಿಂದ ಕಳೆದುಕೊಂಡಿದ್ದೇನೆ ಎಂದಿದ್ದಾರೆ. ಆದರೆ ಸ್ವಿಗಿ ಸಂಸ್ಥೆ ಹೇಳಿರುವ ಪ್ರಕಾರ ಆತನ ಕೆಲಸ ಹೋಗಿಲ್ಲ , ಆತನ ಸರ್ವಿಸ್ ಆ್ಯಪ್ ಹಗೂ ಐಡಿ ಕ್ಲೋಸ್ ಆಗಿಲ್ಲ ಎಂದಿದೆ.