Advertisement
ಏನಿದು ಅಬಕಾರಿ ನೀತಿ?ತಜ್ಞರ ಸಮಿತಿಯೊಂದು ನೀಡಿದ ವರದಿ ಪ್ರಕಾರ, ಕೇಜ್ರಿವಾಲ್ ಸರಕಾರ, 2021ರ ನವೆಂಬರ್ 17ರಂದು ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಅದರಂತೆ ಖಾಸಗಿ ಕಂಪೆನಿಗಳಿಗೆ ಓಪನ್ ಟೆಂಡರ್ ಮೂಲಕ 849 ಲಿಕ್ಕರ್ ವೆಂಡ್ಸ್‌ಗಳನ್ನು ನೀಡಲಾಗಿತ್ತು. ಅಲ್ಲದೆ, ದಿಲ್ಲಿ ನಗರವನ್ನು 32 ವಲಯಗಳಾಗಿ ವಿಂಗಡಿಸಿ, ಪ್ರತೀ ವಲಯಕ್ಕೆ 27 ಮಾರಾಟ ಮಳಿಗೆಗಳನ್ನು ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಅಕ್ರಮಗಳಾಗಿವೆ ಎಂದು ಶಂಕೆಯಿಂದ ದಿಲ್ಲಿ ಲೆ| ಗವರ್ನರ್ ವಿಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. ವಿಚಿತ್ರವೆಂದರೆ, ಈಗ ಹೊಸ ನೀತಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂದು ಹಳೇ ನೀತಿಯನ್ನೇ ಜಾರಿಗೆ ತರಲಾಗಿದೆ.
ಎಫ್ಐಆರ್ ನಲ್ಲಿ ದಾಖ ಲಿಸಿರುವಂತೆ ಮನೀಷ್ ಸಿಸೋ ಡಿಯಾ ಅವರ ಆಪ್ತರು, ಅಬಕಾರಿ ಪರವಾನಗಿಗಳನ್ನು ತಮಗೆ ಬೇಕಾದವರಿಗೆ ನೀಡಿದ್ದು, ಇವರಿಗೆ 4 ರಿಂದ 5 ಕೋಟಿ ರೂ.ಗಳಷ್ಟು ಹಣ ಸಂದಾಯ ಮಾಡಲಾಗಿದೆ. ಡಿಸಿಎಂ ಸೇರಿದಂತೆ 15 ಮಂದಿ ವಿರುದ್ಧ ಎಫ್ಐಆರ್ ಹಾಕಲಾಗಿದೆ. ಆಗಿರುವ ಅಕ್ರಮವೇನು?
ಸಿಬಿಐ ಪ್ರಕಾರ, ಅಬಕಾರಿ ನೀತಿ 2021-22 ಅನ್ನು ದಿಲ್ಲಿ ಸರಕಾರ ಸಂಬಂಧಿತರ ಒಪ್ಪಿಗೆ ಪಡೆಯದೆಯೇ ಜಾರಿ ಮಾಡಿದೆ. ಹಾಗೆಯೇ ಅಬಕಾರಿ ಪರವಾನಗಿ ವಿಚಾರದಲ್ಲಿ ಕೆಲವೊಬ್ಬರಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಇಂಡೋ ಸ್ಪಿರಿಟ್‌ನ ಮಾಲಕ ಸಮೀರ್ ಮಹೇಂದು ಅವರ ಆಪ್ತರಿಗೆ ಕೋಟಿಗಳ ಲೆಕ್ಕಾಚಾರದಲ್ಲಿ ಹಣ ಪಾವತಿ ಮಾಡಲಾಗಿದೆ. ಅಲ್ಲದೆ, ಈ ಸಮೀರ್ ಮಹೇಂದು ಅವರೇ ಹೊಸ ಅಬಕಾರಿ ನೀತಿಯ ಅಕ್ರಮದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.