Advertisement

ಪ್ರೊ ಕಬಡ್ಡಿ: ದಬಾಂಗ್‌ ದಿಲ್ಲಿ ಜಯ; ಮತ್ತೆ ಮುಳುಗಿದ ಟೈಟಾನ್‌

10:34 PM Jan 05, 2022 | Team Udayavani |

ಬೆಂಗಳೂರು: ದಬಾಂಗ್‌ ದಿಲ್ಲಿ 4ನೇ ಜಯದೊಂದಿಗೆ ಮುನ್ನುಗ್ಗಿದೆ. ಬುಧವಾರದ ಪ್ರೊ ಕಬಡ್ಡಿ ಮೇಲಾಟದಲ್ಲಿ ಅದು ತೆಲುಗು ಟೈಟಾನ್ಸ್‌ ವಿರುದ್ಧ 36-35 ಅಂಕಗಳ ರೋಚಕ ಜಯ ಸಾಧಿಸಿತು.

Advertisement

ಇನ್ನೂ ಗೆಲುವಿನ ಮುಖ ಕಾಣದ ತೆಲುಗು ಟೈಟಾನ್ಸ್‌ಗೆ ಎದುರಾದ 4ನೇ ಸೋಲು ಇದಾಗಿದೆ.

ಮತ್ತೊಂದು ಪಂದ್ಯದಲ್ಲಿ ಪುನೇರಿ ಪಲ್ಟಾನ್‌ 33-26 ಅಂತರದಿಂದ ಗುಜರಾತ್‌ ಜೈಂಟ್ಸ್‌ಗೆ ಸೋಲುಣಿಸಿತು.

ಸ್ಟಾರ್‌ ರೈಡರ್‌ ನವೀನ್‌ ಕುಮಾರ್‌ 25 ಅಂಕ ಕಲೆಹಾಕಿ ದಿಲ್ಲಿ ಗೆಲುವಿನ ಹೀರೋ ಎನಿಸಿದರು. ರೈಡರ್‌ ರಜನೀಶ್‌ ಟೈಟಾನ್ಸ್‌ ಪರ 20 ಅಂಕ ಗಳಿಸಿದರೂ ತಂಡ ಗೆಲುವಿನ ಖಾತೆ ತೆರೆಯಲು ವಿಫ‌ಲವಾಯಿತು.

ಇದನ್ನೂ ಓದಿ:ಹಿಂದೂ ಮಹಿಳೆಯರ ಟಾರ್ಗೆಟ್‌ ಮಾಡುತ್ತಿದ್ದ ಜಾಲ ಬಯಲಿಗೆ

Advertisement

ಪುನೇರಿಗೆ 2ನೇ ಜಯ
ಹ್ಯಾಟ್ರಿಕ್‌ ಸೋಲಿನ ಬಳಿಕ ಪುನೇರಿ ಪಲ್ಟಾನ್‌ ಗೆಲುವಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಯಿತು. ಇದು ಪುನೇರಿಗೆ ಒಲಿದ ಕೇವಲ 2ನೇ ಜಯ. ಇನ್ನೊಂದೆಡೆ ಗುಜರಾತ್‌ ಕಂಟಕ ಮತ್ತೆ ಮುಂದುವರಿಯಿತು. ಆರಂಭಿಕ ಪಂದ್ಯದ ಬಳಿಕ ಅದು ಗೆಲುವಿನ ಮುಖ ಕಂಡಿಲ್ಲ. ಇದು 3ನೇ ಸೋಲು. ಎರಡನ್ನು ಟೈ ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next