Advertisement

ರಕ್ಷಣಾ ಒಪ್ಪಂದದ ಭ್ರಷ್ಟಾಚಾರ ಪ್ರಕರಣ; ಜಯಾ ಜೇಟ್ಲಿ ಹಾಗೂ ಇಬ್ಬರಿಗೆ 4 ವರ್ಷ ಜೈಲುಶಿಕ್ಷೆ

05:03 PM Jul 30, 2020 | Nagendra Trasi |

ನವದೆಹಲಿ:ಎರಡು ದಶಕಗಳ ಹಿಂದಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಹಾಗೂ ಮತ್ತಿಬ್ಬರಿಗೆ ದೆಹಲಿ ಕೋರ್ಟ್ ಗುರುವಾರ (ಜುಲೈ 30-2020) ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ವರದಿ ತಿಳಿಸಿದೆ.

Advertisement

ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಸಂಚು ಆರೋಪದಲ್ಲಿ ಜಯಾ ಜೇಟ್ಲಿ ಹಾಗೂ ಆಕೆಯ ಪಕ್ಷದ ಮಾಜಿ ಸಹೋದ್ಯೋಗಿ ಗೋಪಾಲ್ ಪಚೇರ್ ವಾಲ್ ಮತ್ತು ಮೇಜರ್ ಜನರಲ್ (ನಿವೃತ್ತ) ಎಸ್ ಪಿ ಮುರ್ಗೈ ಅವರನ್ನು ದೋಷಿ ಎಂದು ಸಿಬಿಐ ಸ್ಪೆಷಲ್ ಜಡ್ಜ್ ವೀರೇಂದ್ರ ಭಟ್ ತೀರ್ಪು ನೀಡಿದ್ದಾರೆ.

ರಕ್ಷಣಾ ಒಪ್ಪಂದ ಸಂಬಂಧಿ ಉದ್ದೇಶದಲ್ಲಿ ನಡೆದ ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಸಂಚಿನ ಆರೋಪದ ಕುರಿತು ನಡೆದ ವಿಚಾರಣಾ ಪ್ರಕ್ರಿಯೆಯಲ್ಲಿ ಆರೋಪ ಸಾಬೀತಾಗಿದೆ. ಅಲ್ಲದೇ ಮೂವರಿಗೂ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಮತ್ತು ಗುರುವಾರ (ಜುಲೈ30-2020) ಸಂಜೆ 5 ಗಂಟೆಯೊಳಗೆ ಶರಣಾಗುವಂತೆ ಕೋರ್ಟ್ ನಿರ್ದೇಶನ ನೀಡಿದೆ.

ಏನಿದು ಭ್ರಷ್ಟಾಚಾರ ಪ್ರಕರಣ:
ಇದು ಬಯಲಿಗೆ ಬಂದಿದ್ದು 2001ರ ಜನವರಿಯಲ್ಲಿ ತೆಹಲ್ಕಾ ಡಾಟ್ ಕಾಮ್ ನಡೆಸಿದ್ದ ಆಪರೇಶನ್ ವೆಸ್ಟ್ ಎಂಡ್ ಹೆಸರಿನ ಸ್ಟಿಂಗ್ ಆಪರೇಶನ್ ಮೂಲಕ ಭ್ರಷ್ಟಾಚಾರ ಪ್ರಕರಣ ಹೊರಬಿದ್ದಿತ್ತು.

ಆಪರೇಶನ್ ವೆಸ್ಟ್ ಎಂಡ್ ಹೆಸರಿನ ಸ್ಟಿಂಗ್ ಆಪರೇಶನ್ ಸುದ್ದಿಯನ್ನು ತೆಹಲ್ಕಾ ಪ್ರಸಾರ ಮಾಡಿತ್ತು..ವರದಿ ಪ್ರಕಾರ ತೆಹಲ್ಕಾದ ವರದಿಗಾರರಿಂದ ಆರೋಪಿಗಳು ರಕ್ಷಣಾ ಒಪ್ಪಂದ ಉದ್ದೇಶದ ಬಗ್ಗೆ ಲಂಚ ಸ್ವೀಕರಿಸಿದ್ದರು. ಭಾರತೀಯ ಸೇನೆಗೆ ಕೈಯಲ್ಲಿ ಹಿಡಿದುಕೊಳ್ಳಬಹುದಾದ ಥರ್ಮಲ್ ಇಮೇಜರ್ಸ್ (ಶಾಖ ಪರೀಕ್ಷೆಯ) ಅನ್ನು ಸರಬರಾಜು ಮಾಡುವ ಪ್ರತಿಷ್ಠಿತ(ಅನಾಮಧೇಯ) ಕಂಪನಿಯ ಪ್ರತಿನಿಧಿಗಳು ಎಂಬಂತೆ ಜಯಾ ಹಾಗೂ ಇತರರನ್ನು ಭೇಟಿಯಾಗಿ ಡೀಲ್ ಕುದುರಿಸಿದ್ದರು.

Advertisement

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರ ಮನೆಯಲ್ಲಿ ಈ ಮಾತುಕತೆ ನಡೆದಿತ್ತು. ನಂತರ 2001ರ ಮಾರ್ಚ್ ನಲ್ಲಿ ಜಾರ್ಜ್ ಫರ್ನಾಂಡಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕೋರ್ಟ್ ಆದೇಶದ ಪ್ರಕಾರ, ವೆಸ್ಟ್ ಎಂಡ್ ಇಂಟರ್ ನ್ಯಾಷನಲ್ ಎಂಬ ಅನಾಮಧೇಯ ಕಂಪನಿಯ ಪ್ರತಿನಿಧಿ ಮ್ಯಾಥ್ಯೂ ಸಾಮ್ಯುಯೆಲ್ ಅವರಿಂದ ಕಾನೂನು ಬಾಹಿರವಾಗಿ ಜಯಾ ಜೇಟ್ಲಿ ಎರಡು ಲಕ್ಷ ರೂಪಾಯಿ ಲಂಚ ಹಾಗೂ ಮುರ್ಗೈ 20 ಸಾವಿರ ರೂ. ಲಂಚ ಸ್ವೀಕರಿಸಿದ್ದರು ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next