Advertisement
ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಮತ್ತು ಪೃಥ್ವಿ ಶಾ ಉತ್ತಮ ಆಟವಾಡುವ ಭರವಸೆ ನೀಡಿದ್ದರು. ಆದರೇ ರನ್ ಗಳಿಸುವ ಭರದಲ್ಲಿ ಶಿಖರ್ ಧವನ್ ರನೌಟ್ ಆಗಿ ಶೂನ್ಯಕ್ಕೆ ನಿರ್ಗಮಿಸಿದರು. ಪೃಥ್ವಿ ಶಾ (5) ಕೂಡ ಶಮಿ ಎಸೆತದಲ್ಲಿ ಜೋರ್ಡನ್ ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು.
Related Articles
Advertisement
ಕೇವಲ 21 ಎಸೆತಗಳಲ್ಲಿ ಭರ್ಜರಿ 53 ರನ್ ಸಿಡಿಸಿದ ಸ್ಟೊಯ್ನ್ಸ್ ಪಂಜಾಬ್ ವಿರುದ್ಧ ತನ್ನ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಭರ್ಜರಿ ಪಾತ್ರವನ್ನು ವಹಿಸಿದರು.
ಇದನ್ನೂ ಓದಿ: IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್
ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ ಸ್ಟೊಯ್ನ್ಸ್ 3 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿದರು. ಕ್ರಿಸ್ ಜೋರ್ಡಾನ್ ಅವರ ಒಂದೇ ಓವರ್ ನಲ್ಲಿ ಸ್ಟೊಯ್ನ್ಸ್ 25 ರನ್ ಸಿಡಿಸಿದ್ದು ಅವರ ಇಂದಿನ ಬ್ಯಾಟಿಂಗ್ ಪರಾಕ್ರಮಕ್ಕೆ ಸಾಕ್ಷಿಯಾಗಿತ್ತು. 19.5ನೇ ಓವರ್ ನಲ್ಲಿ ರನೌಟಾಗುವ ಮೊದಲು ಸ್ಟೊಯ್ನ್ಸ್ ಅವರು 53 ರನ್ ಬಾರಿಸಿ ತನ್ನ ತಂಡವನ್ನು ಸುರಕ್ಷಿತ ಸ್ಥಿತಿಯಲ್ಲಿ ಇರಿಸಿದ್ದರು. ಅವರ ಜೊತೆಗಾರರಾಗಿದ್ದ ರಬಾಡ ಅವರು ಒಂದೇ ಒಂದು ಎಸೆತ ಎದುರಿಸದೇ ಸ್ಟೊಯ್ನ್ಸ ಬಿರುಗಾಳಿಗೆ ಮೂಕಪ್ರೇಕ್ಷಕರಾಗಿದ್ದರು! ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 157 ರನ್ ಗಳನ್ನು ಕಲೆಹಾಕಿತು. ಸ್ಟೊಯ್ನ್ಸ್ ಹೊರತುಪಡಿಸಿ ಡೆಲ್ಲಿ ಕ್ಯಾಪಿಟಲ್ಸ್ ಪರ ಶ್ರೇಯಸ್ ಅಯ್ಯರ್ (39), ರಿಷಭ್ ಪಂತ್ (31) ಉತ್ತಮ ಬ್ಯಾಟಿಂಗ್ ನಡೆಸಿದರು. ಕಿಂಗ್ಸ್ ಪಂಜಾಬ್ ಪರ ಮಹಮ್ಮದ್ ಶಮಿ 3 ವಿಕೆಟ್ ಪಡೆದು ಮಿಂಚಿದರೆ, ಶೆಲ್ಡನ್ ಕಾಟ್ರೆಲ್ 2 ವಿಕೆಟ್ ಪಡೆದರು.