Advertisement

Delhi Capitals ಆಡಳಿತ ಬದಲಾವಣೆ: ಗಂಗೂಲಿ ಅಧಿಕಾರ ಕಡಿತ; ಪಂತ್‌ ಬಗ್ಗೆಯೂ ಹೊಸ ನಿರ್ಧಾರ

03:50 PM Oct 17, 2024 | Team Udayavani |

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಫ್ರಾಂಚೈಸ್‌ ನ ಸಹ-ಮಾಲೀಕರಾದ ಜಿಎಂಆರ್ ಮತ್ತು ಜೆಎಸ್‌ಡಬ್ಲ್ಯೂ ಗ್ರೂಪ್ಸ್ ಗುರುವಾರ (ಅ.17) ತಂಡದ ನಿರ್ವಹಣೆಗೆ ಸಂಬಂಧಿಸಿದಂತೆ ಜಂಟಿ ಹೇಳಿಕೆಯನ್ನು ನೀದೆ. ಹೊಸ ನೇಮಕಾತಿಗಳು, ನಾಯಕತ್ವದಲ್ಲಿನ ಬದಲಾವಣೆಗಳು ಮತ್ತು ಮುಖ್ಯವಾಗಿ ಸೌರವ್ ಗಂಗೂಲಿ (Sourav Ganguly) ಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್‌ ಮಾಹಿತಿ ನೀಡಿದೆ.

Advertisement

ಟೀಂ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ ಅವರು ಕಳೆದೆರಡು ಸೀಸನ್‌ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕರಾಗಿದ್ದರು. ಆದರೆ ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ತಂಡದೊಂದಿಗೆ ಮುಂದುವರಿಯುವುದು ಕಷ್ಟ ಎನ್ನಲಾಗಿದೆ.

ಮುಂದಿನ ಎರಡು ವರ್ಷಗಳಲ್ಲಿ, ಅವರು ಕ್ರಿಕೆಟ್‌ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾರೆ, ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ನ ಫ್ರಾಂಚೈಸಿಯಾದ ದಕ್ಷಿಣ ಆಫ್ರಿಕಾದ ಎಸ್‌ಎ20 ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಲಸ ಮಾಡಲಿದ್ದಾರೆ.

ಈ ಬದಲಾವಣೆಯು ಪ್ರಾಥಮಿಕವಾಗಿ ಜೆಎಸ್‌ ಡಬ್ಲ್ಯೂ ಗ್ರೂಪ್‌ ನೊಂದಿಗಿನ ಗಂಗೂಲಿ ಅವರ ಒಡನಾಟದ ಕಾರಣದಿಂದಾಗಿರುತ್ತದೆ. ಜೆಎಸ್‌ ಡ್ಲ್ಯೂ ಗ್ರೂಪ್ ಎರಡು ವರ್ಷಗಳ ನಂತರ ತಂಡದ ನಿಯಂತ್ರಣವನ್ನು ಮರಳಿ ಪಡೆಯುತ್ತದೆ. ಈ ಮಧ್ಯೆ, ಕಿರಣ್ ಕುಮಾರ್ ಗ್ರಾಂಧಿ ಒಡೆತನದ ಜಿಎಂಆರ್ ಗ್ರೂಪ್ ಮುಂದಿನ ಎರಡು ವರ್ಷಗಳವರೆಗೆ ಫ್ರಾಂಚೈಸಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರಿಂದ, ಗಂಗೂಲಿ ಅವರು ಒಂದು ಹೆಜ್ಜೆ ಪಕ್ಕಕ್ಕೆ ಇಡಬೇಕಾಗುತ್ತದೆ. ಈ ವೇಳೆ ಮಾಜಿ ಆಟಗಾರರಾದ ವೈ ವೇಣುಗೋಪಾಲ್ ರಾವ್ ಮತ್ತು ಹೇಮಂಗ್ ಬದಾನಿ ಅವರು ಡೆಲ್ಲಿ ತಂಡದ ಉಸ್ತುವಾರಿ ವಹಿಸಲಿದ್ದಾರೆ.

Advertisement

ಅದಾಗ್ಯೂ ಗಂಗೂಲಿ ಐಪಿಎಲ್ ಹರಾಜಿನ ಭಾಗವಾಗುತ್ತಾರೆ. ಆದರೆ ಬಹುಶಃ ಸೀಮಿತ ಸಾಮರ್ಥ್ಯದಲ್ಲಿ ಇರಲಿದ್ದಾರೆ ಎಂದು ಕ್ರಿಕ್‌ ಬಜ್‌ ವರದಿ ಮಾಡಿದೆ. ಎರಡು ಗುಂಪುಗಳ ನಡುವಿನ ಒಪ್ಪಂದ ಪ್ರಕಾರ, ಹರಾಜು ಮತ್ತು ಆಟಗಾರರ ಧಾರಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಪಾಲುದಾರರು ಜಂಟಿಯಾಗಿ ತೆಗೆದುಕೊಳ್ಳುತ್ತಾರೆ.

“ಹರಾಜು, ನಾಯಕತ್ವ, ಆಟಗಾರರ ಬಿಡುಗಡೆಗಳು ಮತ್ತು ಉಳಿಸಿಕೊಳ್ಳುವಿಕೆಯಂತಹ ಪ್ರಮುಖ ನಿರ್ಧಾರಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ಮಂಡಳಿಯು ಎರಡೂ ಗುಂಪುಗಳ ಹಿರಿಯ ನಾಯಕತ್ವದ ನಡುವೆ ಪರಸ್ಪರ ಒಪ್ಪಂದದೊಂದಿಗೆ ತೆಗೆದುಕೊಳ್ಳುತ್ತದೆ” ಎಂದು ಜಂಟಿ ಪತ್ರಿಕೆ ಪ್ರಕಟಣೆ ಹೇಳಿದೆ.

ನಾಯಕ ರಿಷಭ್‌ ಪಂತ್ ಅವರು‌ ತಂಡದಲ್ಲಿ ಉಳಿಸಿಕೊಳ್ಳಲು ಬಯಸುತ್ತಾರೆಯೇ, ಇಲ್ಲವೇ ಎನ್ನುವುದನ್ನು ಅವರ ನಿರ್ಧಾರಕ್ಕೆ ಫ್ರಾಂಚೈಸಿ ಬಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next