Advertisement

Delhi Govt: ಮಾಲಿನ್ಯ ತಡೆಗೆ ಹೆಜ್ಜೆಯಿಟ್ಟ ದಿಲ್ಲಿ ಸರ್ಕಾರ: 99 ತಂಡ ಸಿದ್ಧ

09:43 PM Oct 15, 2024 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸರ್ಕಾರಿ ಮತ್ತು ಖಾಸಗಿ ನಿರ್ಮಾಣ ಸ್ಥಳಗಳಲ್ಲಿ ಧೂಳು ನಿಯಂತ್ರಣ ಕ್ರಮ ಪಾಲನೆ ಆಗುತ್ತಿದೆಯೇ ಎಂದು ಪರಿಶೀಲಿಸಲು 99 ತಂಡಗಳನ್ನು ರಚಿಸಲಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಆತಿಶಿ ತಿಳಿಸಿದ್ದಾರೆ. ಕಳೆದೆರಡು ದಿನಗಳಿಂದ ದಿಲ್ಲಿ ವಾಯು ಗುಣಮಟ್ಟ ಕಳಪೆ ಹಂತಕ್ಕೆ ತಲುಪಿರುವ ಬೆನ್ನಲ್ಲೇ ಆತಿಶಿ ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ್ದು, ಸಭೆ ಬಳಿಕ ಈ ಹೇಳಿಕೆ ನೀಡಿದ್ದಾರೆ.

Advertisement

ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ), ಕಂದಾಯ ಇಲಾಖೆ ಮತ್ತು ಕೈಗಾರಿಕಾ ಇಲಾಖೆಗಳಿಂದ ತಲಾ 33 ತಂಡಗಳು ಖಾಸಗಿ ಮತ್ತು ಸರ್ಕಾರಿ ನಿರ್ಮಾಣ ಸ್ಥಳಗಳಿಗೆ ಭೇಟಿ ನೀಡಿ ಧೂಳು ನಿಯಂತ್ರಣ ಕ್ರಮ ಪಾಲನೆ ಪರಿಶೀಲಿಸಿ “ಗ್ರೀನ್‌ ವಾರ್‌ ರೂಂ’ಗೆ ವರದಿಗಳನ್ನು ಸಲ್ಲಿಸಲಿವೆ. ಜತೆಗೆ ನಿರ್ಮಾಣ ಮತ್ತು ನೆಲಸಮ ಪ್ರಕ್ರಿಯೆಗಳ ತ್ಯಾಜ್ಯ ವಿಲೇವಾರಿ ಮೇಲ್ವಿಚಾರಣೆಗೆ ಬೆಳಗ್ಗೆ 79 ತಂಡ, ರಾತ್ರಿಗೆ 75 ತಂಡಗಳನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.

ಏತನ್ಮಧ್ಯೆ ಕೆಲವು ಏರ್‌ ಪ್ಯೂರಿಫೈರ್‌ ಕಂಪನಿಗಳು ಬರೀ ವದಂತಿ ಹಬ್ಬಿಸುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆತಂಕ ವ್ಯಕ್ತ ಪಡಿಸಿದ್ದರು. ಈ ಬೆನ್ನಲ್ಲೇ ಇಂಥ ಕಂಪನಿಗಳು ನೀಡುತ್ತಿರುವ ಮಾಹಿತಿ ಸತ್ಯವೋ ಸುಳ್ಳೋ ಎಂದು ಮಾರುಕಟ್ಟೆ ಕಣ್ಗಾವಲು, ಸಮೀಕ್ಷೆಗಳ ಮೂಲಕ ಖಾತರಿ ಪಡಿಸಿಕೊಳ್ಳುವುದಾಗಿ ಮಂಗಳವಾರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖಾರೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next