ಬೆಂಗಳೂರು: ಉಪ ಚುನಾವಣೆ ಘೋಷಣೆ ಮರು ದಿನವೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭವಾಗಿದ್ದು, ಬುಧವಾರ ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಿಎಂ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ಸಭೆ ನಡೆಸಿದರು.
ಇದರಲ್ಲಿ ಬಹುತೇಕ ಮೂರೂ ಕ್ಷೇತ್ರಗಳ ಉಪಚುನಾವಣೆ ಬಗ್ಗೆಯೇ ಸುದೀರ್ಘ ಚರ್ಚೆ ನಡೆ ದಿದೆ. ಶತಾಯಗತಾಯ “ಕ್ಲೀನ್ ಸ್ವೀಪ್ ‘ ಮಾಡಬೇಕು ಎಂದು ಸೂಚನೆ ನೀಡಿದ್ದು, ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿಯನ್ನು ರಾಜ್ಯ ನಾಯಕರಿಗೇ ಬಿಟ್ಟಿದ್ದಾರೆ ಎನ್ನಲಾಗಿದೆ. ನಿರೀಕ್ಷೆಯಂತೆ ಸಂಡೂರಿನಲ್ಲಿ ಮಾಜಿ ಶಾಸಕ ಇ. ತುಕಾರಾಂ ಪುತ್ರಿ ಅಥವಾ ಪುತ್ರನಿಗೇ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ.
ಅದರಲ್ಲೂ ಪುತ್ರಿ ಸೌಪರ್ಣಿಕಾ ಅವರನ್ನು ಅಖಾಡಕ್ಕಿಳಿಸುವ ಬಗ್ಗೆಯೇ ಹೆಚ್ಚು ಒಲವು ಇದೆ. ಉಳಿದೆರಡು ಕ್ಷೇತ್ರಗಳಿಗೆ ಗೆಲ್ಲುವ ಕುದುರೆಯ ಹುಡುಕಾಟ ಮತ್ತು ಲೆಕ್ಕಾಚಾರ ನಡೆದಿದೆ. ಬಣಗಳ ಭಿನ್ನಾಭಿಪ್ರಾಯಗಳನ್ನು ಬದಿ ಗೊತ್ತಿ, ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸ ಬೇಕು. ಸಾಮಾನ್ಯವಾಗಿ ಉಪ ಚುನಾ ವಣೆಯಲ್ಲಿ ಆಡಳಿತ ಪಕ್ಷದ ಹಿಡಿತ ಇರುತ್ತದೆ. ಅದು ಈ ಚುನಾವಣೆಯ ಗೆಲುವಿನ ರೂಪದಲ್ಲಿ ಪ್ರತಿಫಲನ ಆಗಬೇಕು ಎಂದು ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ವಿಶೇಷವಾಗಿ ಚನ್ನಪಟ್ಟಣದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬು ದರ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಆರಂಭದಲ್ಲಿ ಇಲ್ಲಿ ತಾವೇ ಅಭ್ಯರ್ಥಿ ಅಂತಾ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಅನಂತರದಲ್ಲಿ ಯಾರೇ ನಿಂತರೂ ತಾವೇ ಅಭ್ಯರ್ಥಿ ಎಂದರು. ಈ ಮಧ್ಯೆ ಅವರ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಹೆಸರು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಆ ಕ್ಷೇತ್ರದಲ್ಲಿ ಪಾರುಪತ್ಯ ಮೆರೆಯಲು ಸಿದ್ಧತೆ ಗಳನ್ನೂ ಮಾಡಿಕೊಂಡಿದ್ದಾರೆ. ಸಭೆಯಲ್ಲೂ ಇದು ಪ್ರಸ್ತಾವ
ವಾಗಿದ್ದು, ಅಂತಿಮವಾಗಿ ಆಯ್ಕೆಯನ್ನು ಸಿಎಂ- ಡಿಸಿಎಂ ಅವರಿಗೇ ಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.