Advertisement

ಮುಂದಿನ ಮೂರು ವರ್ಷದಲ್ಲಿ ರಕ್ಷಣಾ ರಫ್ತು ಪ್ರಮಾಣ ಮೂರು ಪಟ್ಟು ಹೆಚ್ಚಳ: ಪ್ರಧಾನಿ ಮೋದಿ

03:35 PM Feb 13, 2023 | Team Udayavani |

ಬೆಂಗಳೂರು: ರಕ್ಷಣಾ ಉತ್ಪನ್ನಗಳ ತಯಾರಿಕಾ ರಾಷ್ಟ್ರವಾಗಿ ಹೊರ ಹೊಮ್ಮುತ್ತಿರುವ ಭಾರತ, ಮುಂದಿನ ಮೂರು ವರ್ಷಗಳಲ್ಲಿ ತನ್ನ ರಕ್ಷಣಾ ರಫ್ತು ಪ್ರಮಾಣವನ್ನು ಮೂರು ಪಟ್ಟುಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದ ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳ ‘ಏರೋ ಇಂಡಿಯಾ ಶೋ’ಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ಒಂದೂವರೆ ಶತಕೋಟಿ ಮೊತ್ತದಷ್ಟು ರಫ್ತು ಗುರಿ ಸಾಧನೆ ಆಗಿದೆ. ಇದನ್ನು ಮೂರುಪಟ್ಟು ಅಂದರೆ ಐದು ಶತಕೋಟಿ ಮೊತ್ತದ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುವ ಗುರಿ ಇದೆ ಎಂದರು.

ಕೆಲವು ವರ್ಷಗಳ ಹಿಂದೆ ಭಾರತವು ರಕ್ಷಣಾ ಕ್ಷೇತ್ರದಲ್ಲಿ ವಿಶ್ವದ ಅತಿಹೆಚ್ಚು ಆಮದು ಮಾಡಿಕೊಳ್ಳುವ ಮೊದಲ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ಇತ್ತು. ಈಗ ತಯಾರಿಕಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇದಕ್ಕೆ ವಿಶ್ವದ ಅತಿ ಹಗುರ ಯುದ್ಧ ವಿಮಾನ ತೇಜಸ್, ಐಎನ್ಎಸ್ ವಿಕ್ರಾಂತ, ಹಲವಾರು ಹೆಲಿಕಾಪ್ಟರ್ಗಳು, ಅಷ್ಟೇ ಯಾಕೆ ತುಮಕೂರಿನಲ್ಲಿ ಇತ್ತೀಚೆಗಷ್ಟೇ ರಾಷ್ಟ್ರಕ್ಕೆ ಲೋಕಾರ್ಪಣೆಗೊಂಡ ಹೆಲಿಕಾಪ್ಟರ್ ತಯಾರಿಕೆ ಕಾರ್ಖಾನೆ ಇದನ್ನು ಪ್ರಮಾಣೀಕರಿಸುತ್ತವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next