Advertisement

ಪಾಕ್‌ ಗುಪ್ತಚಾರಿಣಿ ಅಶ್ಲೀಲ ಸಂದೇಶಕ್ಕೆ ಆಕರ್ಷಿತರಾಗಿದ್ದ ಡಿಆರ್‌ಡಿಒ ವಿಜ್ಞಾನಿ!

09:28 PM Jul 08, 2023 | Team Udayavani |

ಪುಣೆ: ಪಾಕಿಸ್ತಾನದ ಗುಪ್ತಚಾರಿಣಿಯಿಂದ ಆಕರ್ಷಿತರಾಗಿ ಆಕೆಯೊಂದಿಗೆ ಭಾರತದ ಕ್ಷಿಪಣಿ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ…

Advertisement

ಹೀಗೆಂದು ಡಿಆರ್‌ಡಿಒ ಮಾಜಿ ವಿಜ್ಞಾನಿ ಪ್ರದೀಪ್‌ ಕುರುಲ್ಕರ್‌ ವಿರುದ್ಧ ಸಲ್ಲಿಕೆಯಾಗಿರುವ ಆರೋಪಟ್ಟಿಯಲ್ಲಿ ಮಹಾರಾಷ್ಟ್ರ ಉಗ್ರ ನಿಗ್ರಹ ದಳ(ಎಟಿಎಸ್‌) ಹೇಳಿದೆ.

ಝರಾ ದಾಸ್‌ಗುಪ್ತಾ ಎಂದು ತನ್ನನ್ನು ಪರಿಚಯಿಸಿಕೊಂಡ ಪಾಕ್‌ ಗುಪ್ತಚಾರಿಣಿ, ತಾನು ಇಂಗ್ಲೆಂಡ್‌ನ‌ಲ್ಲಿ ಎಂಜಿನಿಯರ್‌ ಆಗಿದ್ದೇನೆಂದು ಹೇಳಿಕೊಂಡಿದ್ದರು. ಅವರೊಂದಿಗೆ ಪ್ರದೀಪ್‌ ವಾಟ್ಸ್‌ಆ್ಯಪ್‌ನಲ್ಲಿ ಚಾಟ್‌ ಮಾಡಿದ್ದಾರೆ, ವಿಡಿಯೊ ಕರೆ ಮಾಡಿದ್ದಾರೆ. ಆಕೆ ಪ್ರದೀಪ್‌ಗೆ ಅಶ್ಲೀಲ ವಿಡಿಯೋ ಸಂದೇಶಗಳನ್ನು ಕಳುಹಿಸಿ ಸೆಳೆದುಕೊಂಡಿದ್ದಾಳೆ.

ಇದರ ಪರಿಣಾಮ ಆಕೆಗೆ ಭಾರತದ ಬ್ರಹ್ಮೋಸ್‌ ಕ್ಷಿಪಣಿ ಉಡಾವಣೆ, ಡ್ರೋನ್‌, ಯುಸಿವಿ, ಅಗ್ನಿ ಕ್ಷಿಪಣಿ ಉಡಾವಣಾ ವಾಹಕ, ಸೇನಾ ಸಂಯೋಜನಾ ವ್ಯವಸ್ಥೆ ಸೇರಿದಂತೆ ಇತರೆ ಮಾಹಿತಿಗಳನ್ನು ನೀಡಿದ್ದರು. ಇದು ಅತ್ಯಂತ ಸೂಕ್ಷ್ಮವಾದ, ಮಹತ್ವದ ಮಾಹಿತಿ. ಇದು ಭಾರತದ ಭದ್ರತೆಗೆ ದೊಡ್ಡ ಆಪತ್ತು ತರುವಂತಹ ವಿಚಾರ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಕುರುಲ್ಕರ್‌ರನ್ನು ಮೇ 3ರಂದು ಬಂಧಿಸಲಾಗಿತ್ತು. ಅದುವರೆಗೆ ಅವರು ಡಿಆರ್‌ಡಿಒ ಪುಣೆಯ ಪ್ರಯೋಗಾಲಯವೊಂದರ ನಿರ್ದೇಶಕರಾಗಿದ್ದರು.

ಹನಿಟ್ರ್ಯಾಪ್‌: ಬಿಎಸ್‌ಎಫ್ ಉದ್ಯೋಗಿ ಬಂಧನ
ಅಹಮದಾಬಾದ್‌: ಪಾಕಿಸ್ತಾನಿ ಗುಪ್ತಚರ ಏಜೆಂಟ್‌ ಆಗಿರುವ ಮಹಿಳೆಯೊಂದಿಗೆ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡ ಆರೋಪದಲ್ಲಿ ಗುಜರಾತ್‌ನ ಭುಜ್‌ನಲ್ಲಿನ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಶನಿವಾರ ಬಂಧಿಸಲಾಗಿದೆ. 12ನೇ ತರಗತಿವರೆಗೆ ಓದಿರುವ ಆರೋಪಿ ನೀಲೇಶ್‌ ಬಾಲಿಯಾ ಎಂಬವರು ಬಿಎಸ್‌ಎಫ್ ಪ್ರಧಾನ ಕಚೇರಿಯಲ್ಲಿನ ಎಲೆಕ್ಟ್ರಿಕಲ್‌ ವಿಭಾಗದಲ್ಲಿ ಕಚೇರಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ವಾಟ್ಸ್‌ಆ್ಯಪ್‌ ಮೂಲಕ ನೀಲೇಶ್‌ರನ್ನು ಸಂಪರ್ಕಿಸಿ ಹನಿಟ್ರ್ಯಾಪ್‌ ಮಾಡಿದ್ದ ಪಾಕ್‌ ಗುಪ್ತಚರೆ, ಬಿಎಸ್‌ಎಫ್ಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next