Advertisement

ನೌಕಾಪಡೆಗೆ ಬ್ರಹ್ಮೋಸ್‌ ಬಲ

06:00 AM Dec 02, 2018 | Team Udayavani |

ಹೊಸದಿಲ್ಲಿ: ದೇಶದ ಸೇನಾ ಪಡೆಗೆ ಇನ್ನಷ್ಟು ಬಲ ನೀಡುವ ಬೆಳವಣಿಗೆಯಾಗಿ ರಕ್ಷಣಾ ಸಚಿವಾಲಯವು 3 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಿಗೆ ನೀಡಿದೆ. ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ ಹಾಗೂ ಶಸ್ತ್ರ ಸಜ್ಜಿತ ರಕ್ಷಣಾ ವಾಹನವನ್ನೂ ಈ ಮೊತ್ತದಲ್ಲಿ ಖರೀದಿಸಲಾಗುತ್ತದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವ ದಲ್ಲಿ ನಡೆದ ರಕ್ಷಣಾ ಖರೀದಿ ಸಮಿತಿ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Advertisement

7 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎರಡು ಸಮರ ನೌಕೆಗಳ ಖರೀದಿ ಪ್ರಕ್ರಿಯೆ ಮುಗಿದಿದ್ದು, ರಷ್ಯಾದ ಯಾಂತಾರ್‌ ಶಿಪ್‌ಯಾರ್ಡ್‌ನಲ್ಲಿ ತಯಾರಿಸಲಾಗುತ್ತದೆ. ಈ ಹಡಗುಗಳಿಗೆ ಬ್ರಹ್ಮೋಸ್‌ ಕ್ಷಿಪಣಿ ಅಳವಡಿಸ ಲಾಗುತ್ತದೆ. ಇವು ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ಅತ್ಯಾಧುನಿಕ ಸೂಪರ್‌ಸಾನಿಕ್‌ ಕ್ಷಿಪಣಿಗಳಾಗಿವೆ. ಈ ಹಡಗುಗಳಲ್ಲಿ ಪ್ರಾಥಮಿಕ ಶಸ್ತ್ರಾಸ್ತ್ರವೇ ಬ್ರಹ್ಮೋಸ್‌ ಕ್ಷಿಪಣಿಗಳು ಆಗಿರಲಿವೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಭಾರತೀಯ ಸೇನೆಯ ಮುಖ್ಯ ಯುದ್ಧ ತೋಪು ಅರ್ಜುನ್‌ಗಾಗಿ ಸಶಸ್ತ್ರ ರಕ್ಷಣಾ ವಾಹನಗಳನ್ನು ಖರೀದಿಸಲಾಗುತ್ತಿದೆ. ಇದನ್ನು ಡಿಆರ್‌ಡಿಒ ವಿನ್ಯಾಸಗೊಳಿಸಿದ್ದು, ಸರಕಾರಿ ಸ್ವಾಮ್ಯದ ಬಿಇಎಂಎಲ್‌ ಉತ್ಪಾದನೆ ಮಾಡುತ್ತಿದೆ.

ಏನಿದರ ವಿಶೇಷ?
 3 ಮ್ಯಾಕ್‌ ಅಥವಾ 3,500 ಕಿ.ಮೀ. ವೇಗದಲ್ಲಿ  ಸಾಗುವ ಸಾಮರ್ಥ್ಯ
 ನೆಲ, ಜಲ, ಹಡಗು, ಆಕಾಶ ದಿಂದಲೂ ಹಾರಿಸಬಹುದಾದ ಅವಕಾಶ
  “ಫೈರ್‌ ಆ್ಯಂಡ್‌ ಫಾರ್ಗೆಟ್‌’ ತತ್ವದಡಿ ಕಾರ್ಯಾಚರಣೆ

Advertisement

Udayavani is now on Telegram. Click here to join our channel and stay updated with the latest news.

Next