ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ ನೇತೃತ್ವದಲ್ಲಿ ಸುಮಾರು 150ಕ್ಕೂ ಹೆಚ್ಚಿನ ಜನರು ಗುರುವಾರ ಬಿಜೆಪಿ ಸೇರ್ಪಡೆಗೊಂಡರು.
ನಂದೂರ ಗ್ರಾಮದ ಕಾಂಗ್ರೆಸ್ ಮುಖಂಡ ಫಯೂಮ್ ಸಾಹೇಬ ಹಾಗೂ ಅವರ ಬೆಂಬಲಿಗರು, ಗೋಳಾ ಗ್ರಾಮದ ಯುವಕರು, ರಾಮ ಮೊಹಲ್ಲಾದ ಅಕ್ಬರ್ ಹುಸೇನಿ ಮತ್ತು ಅಬ್ಟಾಸ ಗೋಟೂರ್ ಸೇರಿದಂತೆ ಮಹಿಳೆಯರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.
ಈ ವೇಳೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮೂಡ ಮಾತನಾಡಿ, ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ನನ್ನನ್ನು ಗುರುತಿಸಿ ಪಕ್ಷ ಈ ಬಾರಿ ನನಗೆ ಟಿಕೆಟ್ ನೀಡಿದೆ. ಪಕ್ಷ ನೀಡಿದ ಈ ದೊಡ್ಡ ಜವಾಬ್ದಾರಿಯನ್ನು ಸರಿಯಾಗಿ ತೆಗೆದುಕೊಂಡು ಹೋಗಬೇಕಾದರೆ ಬಿಜೆಪಿ ಕಾರ್ಯಕರ್ತರ ಸಹಕಾರ ಅಗತ್ಯವಾಗಿದೆ. ಈ ಬಾರಿ ತಮ್ಮೆಲ್ಲರ ಆಶೀರ್ವಾದದಿಂದ ಸೇವೆ ಸಲ್ಲುಸುವ ಭಾಗ್ಯ ನನಗೆ ಒಲಿದು ಬರಲಿದೆ ಎಂಬ ಆಶಾಭಾವನೆ ನನ್ನಲಿದೆ ಎಂದು ಹೇಳಿದರು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಧ್ಯಕ್ಷ ಶರಣು ಸಲಗರ್, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಉಪಾಧ್ಯಕ್ಷ ಸಿದ್ರಾಮಪ್ಪ, ಶರಣಪ್ಪ ಹದನೂರ, ಜ್ಯೋತಿ ಶರ್ಮಾ, ಅರುಣ ಪಟ್ಟಣಕರ್, ವಿನೋದ .ಕೆ.ಬಿ.ಶಾಣಪ್ಪ, ಶಾಂತಗೌಡ ನಂದೂರ ಮಾತನಾಡಿದರು. ಬಿಜೆಪಿ ನಗರ ಅಧ್ಯಕ್ಷ ಸುಭಾಷ ಜಾಪೂರ, ಉಪಾಧ್ಯಕ್ಷ ಅನಿಲಕುಮಾರ ಭೋರಗಾಂವಕರ್, ಶಿವಕುಮಾರ ಇಂಗಿನಶೆಟ್ಟಿ, ನರೇಂದ್ರ ವರ್ಮಾ, ಅಣವೀರ ಇಂಗಿನಶೆಟ್ಟಿ, ಅಶೋಕ ಕಟ್ಟಿ, ರಾಜು ಕೋಟೆ, ನಾಗರಾಜ ಮೇಲಗಿರಿ, ರವಿ ಬಿರಾದಾರ, ಬಸವರಾಜ ಬಿರಾದಾರ, ಚಂದ್ರಕಾಂತ ಗೊಬ್ಬೂರಕರ್, ಸೂರ್ಯಕಾಂತ ವಾರದ, ಕನಕಪ್ಪ ದಂಡಗುಲಕರ್, ಅಣೆಪ್ಪ ಇಂಗಿನಶೆಟ್ಟಿ, ಸಂಜಯ್ ಕೋರೆ ಇದ್ದರು.