Advertisement

ಚಿತ್ತಾಪುರದಲ್ಲಿ ಪಕ್ಷಾಂತರ ಪರ್ವ ಆರಂಭ

04:38 PM Sep 14, 2022 | Team Udayavani |

ವಾಡಿ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚಿತ್ತಾಪುರ ಮೀಸಲು ಮತಕ್ಷೇತ್ರದಲ್ಲಿ ಪûಾಂತರ ಪರ್ವ ಆರಂಭವಾಗಿದ್ದು, ಕೆಲ ಮುಖಂಡರು ಬಿಜೆಪಿ ತೊರೆದು ಶಾಸಕ ಪ್ರಿಯಾಂಕ್‌ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರಿದರೆ, ಇನ್ನು ಕೆಲ ಮುಖಂಡರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.

Advertisement

ಚಿತ್ತಾಪುರ ಮತಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಅರವಿಂದ ಚವ್ಹಾಣ ಹಾಗೂ ದ್ವೀದಳ ಧಾನ್ಯ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ಮುಂದಾಳತ್ವದಲ್ಲಿ ಸೋಮವಾರ ಬೆಂಗಳೂರಿಗೆ ತೆರಳಿದ್ದ ಮಹರ್ಷಿ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ, ಡಾ|ಮಲ್ಲಿಕಾರ್ಜುನ ಖರ್ಗೆ ಆಪ್ತ ಭೀಮರಾವ ದೊರೆ, ವೀರಶೈವ ಲಿಂಗಾಯಿತ ಸಮಾಜದ ವಾಡಿ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ಮುಖಂಡರಾದ ಸುಭಾಷ ರದ್ದೇವಾಡಗಿ ಚಾಮನೂರ, ಅಬ್ದುಲ್‌ ರಶೀದ್‌ ಆಜಾದ್‌ ವಾಡಿ, ಗುಂಡುಗೌಡ ಮಾಲಿಪಾಟೀಲ ಚಾಮನೂರ, ಮುಕುºಲ್‌ ಸಾಹೇಬ್‌, ರಾಘವೇಂದ್ರ, ಕಾಶೀನಾಥ, ಭಾಗಣ್ಣ ದೊರೆ, ಮಲ್ಲಿಕಾರ್ಜುನ ದೊಡ್ಡಮನಿ, ಶಮಶೀರ್‌ ಪಟೇಲ್‌, ಇಬ್ರಾಹಿಂ ಪಟೇಲ್‌ ಕುಂದನೂರ, ಸೂಫಿ ಸಾಹೇಬ್‌ ಚಾಮನೂರ, ನೂರ್‌ ಮಹ್ಮದ್‌ ಹಾಗೂ ಒಟ್ಟು 17 ಕಾಂಗ್ರೆಸ್‌ ಮುಖಂಡರು ಅಧಿಲೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪಕ್ಷದ ಕಚೇರಿಯಲ್ಲಿ ಎಲ್ಲ ಮುಖಂಡರಿಗೆ ಕಮಲ ಚಿನ್ಹೆಯ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

ಸಂಸದ ಡಾ|ಉಮೇಶ ಜಾಧವ, ಶಾಸಕ ರಾಜುಗೌಡ, ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜಿಪಂ ಮಾಜಿ ಸದಸ್ಯ ಅರವಿಂದ ಚವ್ಹಾಣ, ವಾಡಿ ಶಕ್ತಿಕೇಂದ್ರ ಅಧ್ಯಕ್ಷ ಶಿವರಾಮ ಪವಾರ, ಪ್ರಧಾನ ಕಾರ್ಯದರ್ಶಿ ರಾಹುಲ ಸಿಂಧಗಿ ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next