Advertisement

ಪಕ್ಷಪಾತ ಆಡಳಿತ ನೀತಿಗೆ ಖಂಡನೆ

01:08 PM Jun 05, 2017 | Team Udayavani |

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಪಾತ ಆಡಳಿತ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವೀರಶೈವ ಸಂಘರ್ಷ ಸಮಿತಿ ಪದಾಧಿಕಾರಿಗಳು ಭಾನುವಾರ ಶ್ರೀ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. 

Advertisement

ಸಾಂವಿಧಾನಿಕ ಹುದ್ದೆ ಅಲಂಕರಿಸುವ ಸಂದರ್ಭದಲ್ಲಿ ಸಂವಿಧಾನದ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸುವ ಪ್ರಮಾಣ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂವಿಧಾನಕ್ಕೆ ಅಪಚಾರ ಆಗುವಂತೆ ಜಾತಿ, ಸಮುದಾಯಗಳ ನಡುವೆ ಕಂದಕ, ಸಂಘರ್ಷಕ್ಕೆ ಕಾರಣವಾಗುವಂತಹ ಆಡಳಿತ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. 

ಇಡೀ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಕೆಲವೇ ಕೆಲವು ಜಾತಿ, ವರ್ಗಗಳಿಗೆ ಮಾತ್ರವೇ ಸೀಮಿತವಾಗಿರುವಂತೆ ಕೆಲಸ ಮಾಡುತ್ತಿದ್ದಾರೆ. ಶಾಲಾ ಮಕ್ಕಳಲ್ಲೂ ಕೂಡಾ ಜಾತಿ ಆಧಾರದಲ್ಲಿ ಸೌಲಭ್ಯ ಒದಗಿಸುತ್ತಿದ್ದಾರೆ. ಉಳಿದ ಸಮುದಾಯದ ಬಡವರನ್ನ ವಂಚಿತರನ್ನಾಗಿ ಮಾಡುತ್ತಿದ್ದಾರೆ.

ಸೌಲಭ್ಯ ಒದಗಿಸುವಲ್ಲಿ ತಾರತಮ್ಯ, ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಮರಾಠ ಇತರೆ ಸಮುದಾಯಗಳನ್ನ ಸಂಪೂರ್ಣವಾಗಿ ನಿರ್ಲಕ್ಷ ಮಾಡುತ್ತಿದೆ.

ಈಚೆಗೆ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ, ಇತರೆ ಸಮುದಾಯದ ಮಕ್ಕಳಿಗೆ ಆ ಸೌಲಭ್ಯ ಕೊಡದೇ ಇರುವುದು ನೋವಿನ ವಿಚಾರ. ಜಾತಿ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡುವುದು ಸರಿಯಲ್ಲ. 

Advertisement

ಕೊಡುವುದಾದರೆ ಎಲ್ಲಾ ಜಾತಿಯವರಿಗೆ ಕೊಡಬೇಕು ಎಂದು ಒತ್ತಾಯಿಸಿದರು. ಎಲ್ಲಾ ಸಮುದಾಯಗಳ ಮತಗಳ ಆಧಾರದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಕೇವಲ ಜಾತಿ ಆಧಾರದಲ್ಲಿ ಸೌಲಭ್ಯ ಒದಗಿಸುವುದು. ಕೆಲವೇ ಜಾತಿ, ವರ್ಗದ ಹಿತದ ಕೆಲಸ ಮಾಡುವುದನ್ನ ಇತರೆ ಸಮುದಾಯದವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಸಂದರ್ಭ ಬಂದಾಗ ಸರಿಯಾದ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು. ಜಿಲ್ಲಾ ಅಧ್ಯಕ್ಷ ಗಣೇಶ್‌ ಹಾದಿಮನಿ, ಡಿ.ವಿ. ಪ್ರಶಾಂತ್‌, ಉಮೇಶ್‌ ಕತ್ತಿ, ಶಂಕರಗೌಡ ಬಿರಾದಾರ್‌, ಕೆ.ವಿ. ಗುರುರಾಜ್‌, ಎಸ್‌.ಜೆ. ಗಣೇಶ್‌, ಎಂ.ಎನ್‌. ಮನು, ಪ್ರಸನ್ನಕುಮಾರ್‌, ಮಂಜುನಾಥ್‌, ಪ್ರಭು ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next