Advertisement

ಮನೆ ಮೇಲೆ ಹಾರಿ ಒಳಗೆ ಬಿದ್ದ ಜಿಂಕೆ: ಇಬ್ಬರಿಗೆ ಗಾಯ

11:07 PM Sep 08, 2019 | Team Udayavani |

ಚಿಕ್ಕಮಗಳೂರು: ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜಿಂಕೆಯೊಂದು ಗುಡ್ಡದ ಮೇಲಿನಿಂದ ಮನೆ ಮೇಲೆ ಹಾರಿದ ಪರಿಣಾಮ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಮನೆಯ ಹೆಂಚು, ರೀಪುಗಳೆಲ್ಲ ಮೈಮೇಲೆ ಬಿದ್ದಿದ್ದರಿಂದ ತಂದೆ ಹಾಗೂ ಮಗಳು ಗಾಯಗೊಂಡಿದ್ದಾರೆ. ಬೀದಿ ನಾಯಿಗಳು ಜಿಂಕೆಯೊಂದನ್ನು ಅಟ್ಟಿಸಿಕೊಂಡು ಬಂದಿದ್ದವು. ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಜಿಂಕೆ ಗುಡ್ಡದ ಮೇಲಿನಿಂದ ಮನೆಯೊಂದರ ಮೇಲೆ ಹಾರಿತು.

Advertisement

ಆಗ ಮನೆಯ ಹೆಂಚುಗಳೆಲ್ಲ ಪುಡಿಯಾಗಿ, ಜಿಂಕೆ ನೇರ ಅಡುಗೆ ಮನೆಯೊಳಗೆ ಬಿತ್ತು. ಈ ವೇಳೆ ಅಡುಗೆ ಮನೆಯೊಳಗಿದ್ದ ಸೀನ ಹಾಗೂ ಇವರ ಮಗಳು ಅನೂಪಾ ಎಂಬುವರಿಗೆ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳನ್ನು ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಮನೆಯೊಳಗೆ ಬಿದ್ದ ಜಿಂಕೆ ತೆರೆದಿದ್ದ ಮನೆಯ ಬಾಗಿಲಿನಿಂದ ಓಡಿ ಹೋಗಿದೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next