Advertisement

ಇಂದು ಬೆಂಗಳೂರಿನಲ್ಲಿ ದೀಪಿಕಾ-ರಣವೀರ್‌ ಆರತಕ್ಷತೆ

11:09 AM Nov 21, 2018 | Team Udayavani |

ನವೆಂಬರ್‌ 14ರಂದು ಇಟಲಿಯ ಸುಂದರ “ಲೇಕ್‌ ಕೊಮೋ’ದಲ್ಲಿ ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ಹಸೆಮಣೆ ಏರಿದ ಬಾಲಿವುಡ್‌ ತಾರೆಯರಾದ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಮದುವೆ ಆರತಕ್ಷತೆ ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ.

Advertisement

ಆರತಕ್ಷತೆ ಕಾರ್ಯಕ್ರಮಕ್ಕಾಗಿ ಮಂಗಳವಾರ ಬೆಳಿಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೀಪಿಕಾ-ರಣವೀರ್‌ ಜೋಡಿ ಆಗಮಿಸಿತು. ಹಣೆ ಮೇಲೆ ಸಿಂಧೂರ ಇಟ್ಟುಕೊಂಡಿದ್ದ ದೀಪಿಕಾ, ಅನಾರ್ಕಲಿ ಚೂಡಿದಾರ್‌ ತೊಟ್ಟು ಕಂಗೊಳಿಸುತ್ತಿದ್ದರೆ, ರಣವೀರ್‌ ಸಿಂಗ್‌ ಕುರ್ತಾ ಪೈಜಾಮಾ ಹಾಕಿಕೊಂಡು ಮಿಂಚುತ್ತಿದ್ದರು. ವಿಮಾನ ನಿಲ್ದಾಣದಿಂದ ಹೊರಬಂದ ದೀಪಿಕಾ-ರಣವೀರ್‌ ಜೋಡಿ ಹೊರಗೆ ನೆರೆದಿದ್ದ ಜನರತ್ತ ಕೈ ಬೀಸಿ ಧನ್ಯವಾದ ತಿಳಿಸಿದರು.

ಬಳಿಕ ಬಿಗಿ ಭದ್ರತೆಯಲ್ಲಿ ಬೆಂಗಳೂರಿನ ತಮ್ಮ ಮನೆಯತ್ತ  ತೆರಳಿದರು. ಇಂದು ದೀಪಿಕಾ-ರಣವೀರ್‌ ಆರತಕ್ಷತೆ ಅದ್ಧೂರಿಯಾಗಿ ನಡೆಯಲಿದ್ದು, ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next