Advertisement

ದೀಪಿಕಾ ಪಡುಕೋಣೆ -ರಣ್‌ವೀರ್‌ ಸಿಂಗ್‌ ಮದುವೆ ಡೇಟ್‌ ಫಿಕ್ಸ್‌ ? 

11:06 AM Mar 07, 2018 | |

ಮುಂಬಯಿ: ಬಾಲಿವುಡ್‌ನ‌ ಬಹುಚರ್ಚಿತ ಜೋಡಿಯಾಗಿರುವ ದೀಪಿಕಾ ಪಡುಕೋಣೆ ಮತ್ತು ರಣ್‌ವೀರ್‌ ಸಿಂಗ್‌ ಅವರು ದಂಪತಿಗಳಾಗುವುದು ಖಚಿತವಾಗಿದ್ದು, ಮದುವೆ ಯಾವಾಗ ಎನ್ನುವ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.

Advertisement

ಈಗಾಗಲೆ ದೀಪಿಕಾ ಕುಟುಂಬಸ್ಥರು ಮುಂಬಯಿಯಲ್ಲಿ ರಣ್‌ವೀರ್‌ ಮನೆಯವರೊಂದಿಗೆ ಮದುವೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. 

ವಿಶೇಷವೆಂದರೆ  ರಣ್‌ವೀರ್‌ ಆಗಲಿ ದೀಪಿಕಾ ಆಗಲಿ ಮದುವೆ ಕುರಿತಾಗಿ ಅಷ್ಟೇನೂ ಅವಸರ ತೋರುತ್ತಿಲ್ಲ ಎನ್ನಲಾಗಿದೆ. ಆದರೆ ನಾಲ್ಕು ತಿಂಗಳ ಒಳಗೆ ಶುಭ ಕಾರ್ಯ ನೆರವೇರಲಿದೆ ಎನ್ನಲಾಗಿದೆ. 

ಸದ್ಯ ದೀಪಿಕಾ ಬೆನ್ನು ನೋವಿನ ಕಾರಣದಿಂದ ನಟನೆಯಿಂದ ಬ್ರೇಕ್‌ ಪಡೆದಿದ್ದು, ರಣ್‌ವೀರ್‌ ಅವರು ಝೋಯಾ ಅಖ್ತರ್‌ ಅವರ ‘ಗಲ್ಲಿ ಬಾಯ್‌’ ಚಿತ್ರದ ಶೂಟಿಂಗ್‌‌ನಲ್ಲಿ ನಿರತರಾಗಿದ್ದಾರೆ.

ಇದುವರೆಗೆ ಹಲವು ವೇದಿಕೆಯಲ್ಲಿ ಜೊತೆಯಾಗಿ ಕೈ ಕೈ ಹಿಡಿದು ಕಾಣಿಸಿಕೊಂಡಿರುವ ಜೋಡಿ ಎಲ್ಲೂ ನಾವಿಬ್ಬರು ಪ್ರೇಮಿಗಳು,ವಿವಾಹವಾಗುತ್ತಿದ್ದೇವೆ ಎನ್ನುವುದನ್ನು ಹೇಳಿಕೊಂಡಿಲ್ಲ.

Advertisement

ಇಬ್ಬರೂ ಮದುವೆಯಾಗವುದು ನಿಶ್ಚಿತವಾಗಿದ್ದು ಅಭಿಮಾನಿಗಳು ಆ ಸಂಭ್ರಮದ ದಿನಕ್ಕಾಗಿ ಕಾಯಬೇಕಾಗಿರುವುದು ಅನಿವಾರ್ಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next