Advertisement

ಮಧ್ಯಾಹ್ನ 2ರ ವರೆಗೆ ವಹಿವಾಟು ನಡೆಸಲು ನಿರ್ಧಾರ

11:23 AM Jul 07, 2020 | Suhan S |

ಸಿಂಧನೂರು: ತಾಲೂಕಿನಲ್ಲಿ ಕಳೆದ 10ದಿನಗಳಿಂದ ಕೋವಿಡ್ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಅಂಗಡಿಗಳ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮಂಗಳವಾರದಿಂದ ಸ್ವ ಇಚ್ಚೆಯಿಂದ ಬಂದ್‌ ಮಾಡಲು ನಿರ್ಧಾರಿಸುವುದಾಗಿ ತಿಳಿಸಿದ್ದಾರೆ.

Advertisement

ನಗರದ ಹೊರ ವಲಯದ ಕಮ್ಮವಾರಿ ಭವನದಲ್ಲಿ ಶಾಸಕ ವೆಂಕಟರಾವ್‌ ನಾಡಗೌಡರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ವ್ಯಾಪಾರಸ್ಥರು ಹಾಗೂ ವರ್ತಕರ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು. ಈ ವೇಳೆ ಮಾತನಾಡಿದ ವರ್ತಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲನಗೌಡ ಕಾನಿಹಾಳ, ಕೋವಿಡ್ ವೈರಸ್‌ ತಡೆಗಟ್ಟಬೇಕಾದರೆ ಎಲ್ಲ ವ್ಯಾಪಾರಸ್ಥರ ನಿರ್ಣಯ ಅವಶ್ಯಕವಾಗಿದೆ ಎಂದು ಹೇಳಿದರು.

ಗೊಬ್ಬರ ಅಂಗಡಿಗಳ ಮಾಲೀಕರ ಸಂಘದ ಅಧ್ಯಕ್ಷ ಎನ್‌. ಭೀಮನಗೌಡ ಗೊರೇಬಾಳ ಮಾತನಾಡಿ, ಎಲ್ಲ ರೈತರ ಸಹಕಾರಕ್ಕಾಗಿ ಮಧ್ಯಾಹ್ನ 2:00ರ ವರೆಗೆ ಎಲ್ಲ ಗೊಬ್ಬರ ಅಂಗಡಿ ತೆಗೆಯಲಾಗಿರುತ್ತದೆ. ಈ ಸಮಯದಲ್ಲಿ ರೈತರು ತಮಗೆ ಅವಶ್ಯಕವಾಗಿರುವ ಗೊಬ್ಬರ ಖರೀದಿಸಿ ವ್ಯಾಪಸ್ಥರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ದಿನದಿಂದ ದಿನಕ್ಕೆ ಕೋವಿಡ್ ಪೀಡಿತರ ಸಂಖ್ಯೆ ತಾಲೂಕಿನಲ್ಲಿ ಹೆಚ್ಚುತ್ತಿದೆ. ಆದ್ದರಿಂದ ಎಲ್ಲ ವ್ಯಾಪಾರಸ್ಥರು ತೆಗೆದುಕೊಂಡಿರುವ ನಿರ್ಧಾರ ಉತ್ತಮವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಮುಂಜಾಗ್ರತೆ ವಹಿಸಲು ಈಗಾಗಲೇ ತಿಳಿಸಲಾಗಿದೆ. ನಗರ ಪ್ರದೇಶದಲ್ಲಿ ಆರೋಗ್ಯ ಇಲಾಖೆಯಿಂದ ರ್‍ಯಾಂಡಮ್‌ ಟೆಸ್ಟಿಂಗ್‌ ಪ್ರಾರಂಭಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ಧರಿಸಬೇಕು ಇಲ್ಲವಾದರೆ. ಅಂತವರ ಮೇಲೆ ನಗರಸಭೆ ಹಾಗೂ ಪೊಲೀಸ್‌ ಇಲಾಖೆಯಿಂದ ದಂಡ ವಿಧಸಬೇಕಾಗುತ್ತದೆ. ಹಾಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಜೀವನ ನಡೆಸಬೇಕು ಎಂದು ಹೇಳಿದರು.

ಹೋಂ ಕ್ವಾರಂಟೈನ್‌ಲ್ಲಿದ್ದವರು ಯಾರು ಹೊರಗಡೆ ತಿರುಗಾಡ ಬಾರದು. ಅಂತವರ ಮೇಲೆ ನಿಗಾ ವಹಿಸಲು ತಾಲೂಕು ಮಟ್ಟದಲ್ಲಿ ಒಂದು ತಂಡ ರಚಿಸಲಾಗಿದೆ. ಇನ್ನು ಮುಂದೆ ಯಾರಾದರೂ ಹೊರಗಡೆ ಬಂದರೆ ಅಂತವರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next