Advertisement
ಬುಧವಾರದಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಕಾವ್ಯಶ್ರೀ ಅವರ ಅದ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೆಲವು ಮಹತ್ತರ ನಿರ್ಧಾರಗಳನ್ನು ತೆಗೆದುಕೊಂಡರೂ ಅವುಗಳನ್ನು ಪಾಲಿಸುವಲ್ಲಿ ನಿರ್ವಹಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಕಾದು ನೋಡಬೇಕಿದೆ.
Related Articles
Advertisement
ಹಿರಿಯ ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ ಪಟ್ಟಣದ ಅಭವೃದ್ದಿಗೆ ಪ.ಪಂಗೆ ೬ ಕೋಟಿ ರೂ ವಿಶೇಷ ಅನುಧಾನ ಶಾಸಕರು ಮುಂಜೂರು ಮಾಡಿಸಿದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ, ಈ ಬಗ್ಗೆ ಇಂಜಿನಿಯರ್ ಚುರುಕುಗೊಳ್ಳಬೇಕು, ಸಿಬ್ಬಂದಿಗಳ ಕೊರತೆ, ಇದರಿಂದ ಜನರ ಮುಂದೆ ನಾವುಗಳು ತಲೆ ತಗ್ಗಿಸಬೇಕಿದೆ ಎಂದರು.
ಸಭೆಯಲ್ಲಿ ಗೌರಿಬಿದನೂರು ಮುಖ್ಯ ರಸ್ತೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಮದ್ಯೆ ರಸ್ತೆಯ ಜಾಗದಲ್ಲಿ ನಿರ್ಮಾಣವಾಗಿರುವ ಮತ್ತು ವಾಗುತ್ತಿರುವ ಅನಧಿಕೃತ ಮನೆಗಳ ತೆರವು ಬಗ್ಗೆ, ಬೀದಿ ಬದಿ ವ್ಯಾಪಾರಿಗಳ ನಿರ್ದಿಷ್ಟ ಜಾಗದ ಬಗ್ಗೆ, ನ್ಯಾಯಾಲಯದಲ್ಲಿರುವ ಕಸ ವಿಲೇವಾರಿ ಘಟಕದ ಬಗ್ಗೆ, ಅಗ್ರಹಾರ ಕುಡಿಯುವ ನೀರಿನ ಘಟಕದ ಭೂಸ್ವಾಧೀನದ ಪರಿಹಾರದ ವಿಳಂಬ ಬಗ್ಗೆ ಹಾಗೂ ನೂತನ ಸ್ಥಾಯಿ ಸಮಿತಿ ಬಗ್ಗೆ ಪ್ರಸ್ತಾಪಿಸಲಾಯಿತು.
ಅಧ್ಯಕ್ಷೆ ಕಾವ್ಯಶ್ರೀ ಮಾತನಾಡಿ, ಪಟ್ಟಣದಲ್ಲಿ ಹಲವಾರು ಅಭಿವೃದಿ ಕಾಮಗಾರಿಗಳು ಅಗಿವೆ, ಅದರೆ ಅವುಗಳ ಉದ್ಘಾಟನೆ ಕಾರ್ಯಕ್ರಮಗಳು ಆಗಿಲ್ಲ, ಅದೇ ರೀತಿ ನ್ಯಾಯಾಲಯದಲ್ಲಿ ಇರುವ ಹಲವು ಪ್ರಕರಣಗಳನ್ನು ನ್ಯಾಯಲಯದಲ್ಲೇ ಹೋರಾಟ ಮಾಡಿ ಸರಿಪಡಿಸಿಕೊಳ್ಳಲಾಗುವುದು ಎಂದರು.
ಮುಖ್ಯಾಧಿಕಾರಿ ಭಾಗ್ಯಮ್ಮ ಮಾತನಾಡಿ ನಾನು ಪ.ಪಂಗೆ ಏಪ್ರಿಲ್ ತಿಂಗಳಿಂದ ಅಧಿಕಾರಿಯಾಗಿ ಬಂದ ಮೇಲೆ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹಾಗೂ ಪಟ್ಟಣ ಪಂಚಾಯಿತಿ ನಿರ್ಣಯಗಳನ್ನು ಅಧ್ಯಕ್ಷರ ಮತ್ತು ಸದಸ್ಯರ ರೊಂದಿಗೆ ಜಾರಿ ತರುವುದಾಗಿ ತಿಳಿಸಿದರು.
ಸಭೆಯಲ್ಲಿ ಪ.ಪಂ ಉಪಾಧ್ಯಕ್ಷೆ ಭಾರತಿ, ಸದಸ್ಯರುಗಳಾದ ನಾಗರಾಜು, ಹೇಮಲತಾ, ಅನಿತಾ, ಹುಸ್ನಪಾರಿಯಾ, ರಂಗನಾಥ್, ಗೋವಿಂದರಾಜು, ಆಧಿಕಾರಿಗಳು ಹಾಜರಿದ್ದರು.