Advertisement
ಅಯೋಧ್ಯೆಯ ರಾಮ ದೇಗುಲದ ಪ್ರಮುಖ ಪೂಜಾರಿ ಆಚಾರ್ಯ ಸತ್ಯೇಂದ್ರ ದಾಸ್ ಅವರನ್ನು ಭೇಟಿ ಮಾಡಿದ ಅನಂತರ ಮಾತನಾಡಿದ ಆನಂದ್ ಸರಸ್ವತಿ ಅವರು, ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಪ್ರತಿಮೆಯು 215 ಮೀಟರ್ ಎತ್ತರವಿರಲಿದ್ದು, ಇದಕ್ಕಾಗಿ ದೇಶದ್ಯಾಂತ ರಥಯಾತ್ರೆ ಮಾಡಿ ಹಣ ಸಂಗ್ರಹಿಸಲಾಗುವುದು ಎಂದರು. ಈ ಪ್ರತಿಮೆಗಾಗಿ ಸುಮಾರು 1,200 ಕೋಟಿ ರೂ. ವೆಚ್ಚವಾಗಲಿದೆ ಎಂದೂ ತಿಳಿಸಿದರು.
ಅಯೋಧ್ಯೆಯ ರಾಮ ದೇಗುಲಕ್ಕಾಗಿ ಹಂಪಿಯ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ 80 ಅಡಿ ಎತ್ತರದ ರಥವೊಂದನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಆನಂದ್ ಸರಸ್ವತಿ ಘೋಷಿಸಿದ್ದಾರೆ. ಇದನ್ನು 2 ವರ್ಷದ ಒಳಗಾಗಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಆನಂದ್ ಸರಸ್ವತಿ ತಿಳಿಸಿದರು.