Advertisement
ಸಂಘದ ಸಮಿತಿ ಸದಸ್ಯರಾದ ವಿಷ್ಣುಮೂರ್ತಿ ಮೈಸೂರು ಅವರು ಸ್ವಯಂ ಸೇವಕರಾಗಲು ಆಗಮಿಸಿದವರಿಗೆ ಸ್ವಾಗತ ಕೋರಿದರು. ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮುಖ್ಯ ಕಾರ್ಯದರ್ಶಿ ರಫೀಕಲಿ ಕೊಡಗು, ಸಮಿತಿ ಸದಸ್ಯರುಗಳಾದ ಅನಿತಾ ಬೆಂಗಳೂರು, ವರದರಾಜ್ ಕೋಲಾರ, ಅಕ್ರಮ್ ಕೊಡಗು, ನಜೀರ ಮಂಡ್ಯ, ಪ್ರತಾಪ್ ಮಡಿಕೇರಿ ಮುಂತಾದವರು ಉಪಸ್ಥಿತರಿದ್ದರು. ದಸರಾ ಕಾರ್ಯಕ್ರಮವು ಡಿ.10ರಂದು ಎಥಿಸಲಾತ್ ನ್ಪೋìಟ್ಸ್ ಅಕಾಡೆಮಿಯಲ್ಲಿ ಬೆಳಗ್ಗೆ ನಡೆಯಲಿದ್ದು ಸಂಜೆ ತಾಯ್ನಾಡಿನಿಂದ ಆಗಮಿಸುವ ಹೆಸರಾಂತ ಕಲಾವಿದರಿಂದ ಸಂಗೀತ ಸಂಜೆ ಮೂಡಿಬರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ದಸರಾ ಕಾರ್ಯಕ್ರಮದ ಕೇಂದ್ರಬಿಂದುವಾದ “ದುಬೈ ಕ್ರೀಡಾ ರತ್ನ ಪ್ರಶಸ್ತಿಯನ್ನು ಮಾಜಿ ಭಾರತೀಯ ವಿಶೇಷ ಚೇತನ ಕ್ರೀಡಾತಾರೆ ಡಾ| ಮಾಲತಿ ಹೊಳ್ಳ ಅವರಿಗೆ ಮತ್ತು ಭಾರತದ ಮಾಜಿ ಕ್ರಿಕೆಟ್ ಆಟಗಾರ ದೊಡ್ಡ ಗಣೇಶ್ ಅವರಿಗೆ ಪ್ರದಾನ ಮಾಡಲಾಗುವುದು. ಅಶ್ವಿನಿ ನಾಚಪ್ಪ, ಡಾ| ಸಿ.ಹೊನ್ನಪ್ಪ ಗೌಡ, ಎಸ್.ವಿ. ಸುನಿಲ್ ಈ ಪ್ರಶಸ್ತಿಯ ಪೂರ್ವ ಪುರಸ್ಕೃತರು. ದುಬೈ ದಸರಾ ಪ್ರಯುಕ್ರ ವಿವಿಧ ಕ್ರೀಡೆಗಳನ್ನು ಆಯೋಜಿಸುವುದರ ಮೂಲಕ ಮಕ್ಕಳು, ಮಹಿಳೆಯರು ಮತ್ತು ಪುರುಷರ ಎಲ್ಲ ವಯಸ್ಕರಿಗೂ ಕ್ರೀಡಾ ರಂಜನೆಯ ಅವಕಾಶ ಮಾಡಿಕೊಟ್ಟಿದ್ದಾರೆ ಹಾಗೂ ಅಂತ್ಯಾಕ್ಷರಿ, ಕನ್ನಡ ರಸಪ್ರಶ್ನೆ, ಗೊಂಬೆ ಸ್ಪರ್ಧೆ, ಕವಿಗೋಷ್ಠಿ ಸಾಹಿತ್ಯಾಸಕ್ತರ ಮನ ತಣಿಸಲಿವೆ ಹಾಗೆ ರಂಗೋಲಿ ಸ್ಪರ್ಧೆ ಮತ್ತು ದಸರಾ ಗೊಂಬೆ ಸ್ಪರ್ಧೆ ಸಾಂಸ್ಕೃತಿಕ ರಂಜನೆ ನೀಡಲಿದೆ.
Related Articles
Advertisement
ಸಭೆಯಲ್ಲಿ ಅಧ್ಯಕ್ಷ ಮಧು ದಾವಣಗೆರೆ, ಉಪಾಧ್ಯಕ್ಷೆ ಹಾದಿಯ ಮಂಡ್ಯ, ಮಮತಾ ಮೈಸೂರು, ಪಲ್ಲವಿ ದಾವಣಗೆರೆ, ವಿಷ್ಣುಮೂರ್ತಿ ಮೈಸೂರು, ಡಾ| ಸವಿತಾ ಮೈಸೂರು, ಶಂಕರ್ ಬೆಳಗಾವಿ, ಮೊಹಿದ್ದೀನ್ ಹುಬ್ಬಳ್ಳಿ, ವರದರಾಜ್ ಕೋಲಾರ , ಚೇತನ್ ಬೆಂಗಳೂರು, ಸ್ವಾತಿ ಚಿತ್ರದುರ್ಗ, ಹಾದಿ ಕುಂದಾಪುರ, ರಜಿನಿ ಬೆಂಗಳೂರು ಮತ್ತು ಉಪಸಮಿತಿ ಸದಸ್ಯರು ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಯುಎಇ ದೇಶದ ಎಲ್ಲ ಕನ್ನಡಿಗರಿಗೆ ಆತ್ಮೀಯ ಸ್ವಾಗತ ಕೋರಿದರು.