Advertisement
ಅಕಾಲಿದಳದ ಸುಧಾರಣಾವಾದಿಗಳ ಪೈಕಿ ಒಬ್ಬರಾಗಿದ್ದ ಬರ್ನಾಲಾ, 1985-87ರಲ್ಲಿ ಮುಖ್ಯಮಂತ್ರಿಯಾಗಿದ್ದರು.ನಂತರದ ದಿನಗಳಲ್ಲಿ ಅವರು ತಮಿಳುನಾಡು, ಉತ್ತರಾಖಂಡ, ಅಂಡಮಾನ್, ಆಂಧ್ರ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಬರ್ನಾಲಾ ತಮಿಳುನಾಡು ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಚಂದ್ರಶೇಖರ್ ನೇತೃತ್ವದ ಕೇಂದ್ರ ಸರಕಾರವು, 1991ರಲ್ಲಿ ಅಂದಿನ ಡಿಎಂಕೆ ಸರಕಾರ ವಜಾಕ್ಕೆ ಶಿಫಾರಸು ಮಾಡುವಂತೆ ಸೂಚಿಸಿತ್ತು. ಆದರೆ ಇದಕ್ಕೆ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಬಿಹಾರಕ್ಕೆ ವರ್ಗ ಮಾಡಲಾಗಿತ್ತು. ಇದರಿಂದ ಬೇಸತ್ತ ಅವರು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಬರ್ನಾಲಾ ಕೃಷಿ ಸಚಿವರಾಗಿದ್ದರು.