Advertisement

New Delhi: ವನಿತಾ ಹಾಕಿ ಮಾಜಿ ನಾಯಕಿ ರಾಣಿ ರಾಂಪಾಲ್‌ ನಿವೃತ್ತಿ

09:16 AM Oct 25, 2024 | Team Udayavani |

ಹೊಸದಿಲ್ಲಿ: ಭಾರತೀಯ ವನಿತಾ ಹಾಕಿ ತಂಡ ಮಾಜಿ ನಾಯಕಿ ರಾಣಿ ರಾಂಪಾಲ್‌ ಗುರುವಾರ ನಿವೃತ್ತಿ ಘೋಷಿಸುವ ಮೂಲಕ ತನ್ನ 16 ವರ್ಷಗಳ ವರ್ಣಮಯ ಹಾಕಿ ಬಾಳ್ವೆಗೆ ಅಂತ್ಯ ಹಾಡಿದ್ದಾರೆ.

Advertisement

29ರ ಹರೆಯದ ರಾಂಪಾಲ್‌ ವನಿತಾ ಹಾಕಿಯ ಅತ್ಯಂತ ಯಶಸ್ವಿ ಆಟ ಗಾರ್ತಿಯರಲ್ಲಿ ಒಬ್ಬರಾಗಿದ್ದರು. 2021ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ತಂಡ ನಾಲ್ಕನೇ ಸ್ಥಾನ ಪಡೆದಿರುವುದು ಅವರ ನಾಯಕತ್ವದಲ್ಲಿ ಭಾರತೀಯ ತಂಡದ ಉತ್ಕೃಷ್ಟ ನಿರ್ವಹಣೆಯಾಗಿದೆ. ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಅವರು 2020ರಲ್ಲಿ ಮೇಜರ್‌ ಧ್ಯಾನ್‌ಚಂದರ್‌ ಖೇಲ್‌ ರತ್ನ ಪ್ರಶಸ್ತಿ ಪಡೆದಿದ್ದರು.

ಹದಿನಾಲ್ಕರ ಹರೆಯದ ವೇಳೆ ಒಲಿಂಪಿಕ್‌ ಅರ್ಹತಾ ಕೂಟವೊಂದರಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆಗೈದಿದ್ದ ರಾಂಪಾಲ್‌ ಅವರು ಭಾರತ ಪರ 254 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಫಾರ್ವರ್ಡ್‌ ಆಟಗಾರ್ತಿ ಆಗಿದ್ದ ಅವರು 205 ಗೋಲು ಹೊಡೆದ ಸಾಧನೆ ಮಾಡಿದ್ದಾರೆ. ಅವರನ್ನು ಇದೀಗ ಸಬ್‌ ಜೂನಿಯರ್‌ ವನಿತಾ ತಂಡದ ರಾಷ್ಟ್ರೀಯ ಕೋಚ್‌ ಆಗಿ ನೇಮಕ ಮಾಡಲಾಗಿದೆ.

ಹರಿಯಾಣದ ಸಣ್ಣ ಪಟ್ಟಣದಲ್ಲಿ ಕಡು ಬಡತನದ ಕುಟುಂಬದಿಂದ ಬಂದ ರಾಂಪಾಲ್‌ ಹಾಕಿ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುತ್ತ ರಾಷ್ಟ್ರೀಯ ತಂಡಕ್ಕೆ ನೇಮಕಗೊಂಡಿದ್ದರು. ಅವರ ತಂದೆ ಎತ್ತಿನ ಗಾಡಿ ಎಳೆಯುವ ವೃತ್ತಿ ಮಾಡುತ್ತಿದ್ದರು. ‘ಇದೊಂದು ಮಹೋನ್ನತ ಪ್ರಯಾಣವಾಗಿದೆ. ನಾನು ಭಾರತಕ್ಕಾಗಿ ಇಷ್ಟು ದಿನ ಆಡುತ್ತೇನೆ ಎಂದು ಭಾವಿಸಿರಲಿಲ್ಲ. ನಾನು ಬಾಲ್ಯದಿಂದಲೂ ಸಾಕಷ್ಟು ಬಡತನವನ್ನು ಕಂಡಿದ್ದ ನಾನು ಯಾವಾಗಲೂ ಏನನ್ನಾದರೂ ಸಾಧನೆ ಮಾಡಲು ದೇಶವನ್ನು ಪ್ರತಿನಿಧಿಸುವತ್ತ ಗಮನ ಹರಿಸಿದೆ ಎಂದು ರಾಂಪಾಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next