Advertisement

ಕೇಂದ್ರ ನೌಕರರ ತುಟ್ಟಿ ಭತ್ತೆ ಶೇ. 4ರಷ್ಟು ಹೆಚ್ಚಳ

10:12 AM Mar 15, 2020 | Sriram |

ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರಿಗೆ ನೀಡಲಾಗುತ್ತಿರುವ ತುಟ್ಟಿ ಭತ್ತೆಯನ್ನು ಈಗಿರುವ ದರಕ್ಕಿಂತ ಶೇ.4ರಷ್ಟು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.

Advertisement

ಇದರಿಂದ ಹಾಲಿ ಶೇ. 17ರಷ್ಟಿರುವ ತುಟ್ಟಿ  ಭತ್ತೆ ಶೇ.21ಕ್ಕೆ ಏರಲಿದೆ. ಹೊಸ ದರ ಇದೇ ವರ್ಷದ ಜ.1ರಿಂದಲೇ ಅನ್ವಯಿಸುವಂತೆ ಆದೇಶಿಸಲಾಗಿದ್ದು, ಕೇಂದ್ರದ 48 ಲಕ್ಷ ನೌಕರರು ಮತ್ತು 65 ಲಕ್ಷ ಪಿಂಚಣಿ ದಾರರಿಗೆ ಇದರ ಲಾಭ ಸಿಗಲಿದೆ.

ಹೊಸದಿಲ್ಲಿಯಲ್ಲಿ ಈ ವಿಷಯ ಪ್ರಕಟಿಸಿದ ಸಚಿವ ಪ್ರಕಾಶ್‌ ಜಾಬ್ಡೇಕರ್‌, ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next