Advertisement
ದಿಣ್ಣೂರು ಮುಖ್ಯರಸ್ತೆ ಕಡಿದಾದ್ದರಿಂದ ನಿತ್ಯ ವಾಹನ ದಟ್ಟಣೆ ಅಧಿಕವಾಗಿದೆ. ಹೀಗಾಗಿ, ಈ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡಲು ನಿರ್ಧರಿಸಲಾಗಿತ್ತು. ಸದ್ಯ 25 ಅಡಿ ಅಗಲವಿರುವ 4.1 ಕಿ.ಮೀ ರಸ್ತೆಯನ್ನು 69.45 ಕೋಟಿ ರೂ.ವೆಚ್ಚದಲ್ಲಿ 80 ಅಡಿಗೆ ವಿಸ್ತರಿಸಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ಇದಕ್ಕಾಗಿ ಈಗಾಗಲೇ ನೀಲನಕ್ಷೆ ಕೂಡಾ ಸಿದ್ಧಪಡಿಸಿತ್ತು.
Related Articles
Advertisement
ಇದಕ್ಕಾಗಿ ಜಾಗ ಗುರುತಿಸಲು ಬಿಬಿಎಂಪಿಗೆ ಸೂಚನೆ ನೀಡಿದ್ದು, ಮುಂದಿನ ಬಜೆಟ್‌ನಲ್ಲಿ ಹಣ ಒದಗಿಸಲು ನಿರ್ಧರಿಸಲಾಗಿದೆ ಎಂದರು. ಈ ವೇಳೆ ಶಾಸಕರಾದ ಭೈರತಿ ಸುರೇಶ್, ಅಖಂಡ ಶ್ರೀನಿವಾಸ್ ಮೂರ್ತಿ, ಸಚಿವ ಜಮೀರ್ ಅಹಮದ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಇದ್ದರು.
ಶಾಲಾ ಮಕ್ಕಳಿಗೆ ಕ್ಷಮೆ ಕೇಳಿದ ಡಿಸಿಎಂ: ದಿಣ್ಣೂರು ಮುಖ್ಯರಸ್ತೆಯಲ್ಲಿ ಪರಿಶೀಲನೆಗೆ ತೆರಳಿವಾಗ ಡಿಸಿಎಂ ಬರುತ್ತಿದ್ದಾರೆ ಎಂದು ಆರ್.ಟಿ.ನಗರ ಮುಖ್ಯ ರಸ್ತೆ ಹಾಗೂ ದಿಣ್ಣೂರು ರಸ್ತೆಯಲ್ಲಿ ಜೀರೋ ಟ್ರಾಫಿಕ್ ಮಾಡಲಾಗಿತ್ತು. ಜೀರೊ ಟ್ರಾಫಿಕ್ ಬಿಸಿ ಶಾಲಾ ಬಸ್‌ಗಳಿಗೂ ತಟ್ಟಿದ್ದು, ಇದರಿಂದಾಗಿ ಮಕ್ಕಳು ಶಾಲೆಗೆ ತಲುಪುವುದು 30 ನಿಮಿಷ ತಡವಾಗಿದೆ.
ಈ ವಿಚಾರ ತಿಳಿದ ಬಳಿಕ ಡಿಸಿಎಂ ಮಕ್ಕಳ ಕ್ಷಮೆ ಕೇಳಿದ್ದಾರೆ. “ಆ್ಯಂಬುಲೆನ್ಸ್ ,ಶಾಲಾ ವಾಹನಕ್ಕೆ ಅಡ್ಡಿ ಮಾಡಬೇಡಿ ಎಂದು ಪೊಲೀಸರಿಗೆ ತಿಳಿಸಲಾಗಿತ್ತು. ಆದರೂ, ಕೆಲವೊಮ್ಮೆ ಇಂತಹ ಘಟನೆ ನಡೆಯುತ್ತವೆ. ಶಾಲಾ ಮಕ್ಕಳಿಗೆ ತಡವಾಗಿದ್ದು, ನನಗೂ ಬೇಸರ ತಂದಿದ್ದು, ಎಲ್ಲರಿಗೂ ಕ್ಷಮೆ ಕೇಳುವೆ’ ಎಂದು ತಿಳಿಸಿದ್ದಾರೆ.