Advertisement
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಕಾರಜೋಳ, ದೆಹಲಿ ಒಂದು ಊರಿಗೆ ಸೀಮಿತವಾದ ಆಡಳಿತ. ದೆಹಲಿಯಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡಿದರು. ರಾಜಕೀಯ ಗಿಮಿಕ್ ಮಾಡಿದರು ಎಂದು ದೂರಿದರು.
Related Articles
Advertisement
ದರಿದ್ರ ರಾಜ್ಯ ಸರ್ಕಾರ ಅಂತ ಜರಿದಿದ್ದ ಸಿದ್ದರಾಮಯ್ಯ ಹೇಳಿಕೆ ವಿಚಾರ, ದರಿದ್ರತನ ಪ್ರಾರಂಭ ಆಗಿದ್ದೆ ಸಿದ್ದರಾಮಯ್ಯ ಸರ್ಕಾರದಿಂದ. ಹೆಚ್ಚು ಸಾಲ ಮಾಡಿದ್ದೆ ಸಿದ್ದರಾಮಯ್ಯ ಅವರು. ನಮ್ಮ ಸಾಲದ ಲಿಮಿಟ್ ದಾಟಿಸಿಬಿಟ್ಟರು. ಅಷ್ಟು ಸಾಲ ಮಾಡಿದ್ದರು. ಎಂದುತಿರುಗೇಟು ನೀಡಿದರು.
ಖಂಡಿತವಾಗಿಯೂ ನಮಗೊಂದು ಅವಕಾಶ ಕೊಡಿ. ಪ್ರಕೃತಿ ವಿಕೋಪದಿಂದ ಬಹಳಷ್ಟು ನಷ್ಟ ಆಯಿತು. ಸುಮಾರು 35 ರಿಂದ 36 ಸಾವಿರ ಕೋಟಿಯಷ್ಟು ಹೆಚ್ಚಿನ ಹೊರೆ ಬಂದಿದೆ. ಹೀಗಾಗಿ ಸ್ವಲ್ಪ ಆರ್ಥಿಕ ತೊಂದರೆ ಬಂದಿದೆ. ಆದರೆ, ಸಿದ್ದರಾಮಯ್ಯ ಅವರು ಹೇಳಿದಂತ ತೊಂದರೆ ಬಂದಿಲ್ಲ. ಪ್ರಕೃತಿ ವಿಕೋಪದಲ್ಲಿ ಮನೆ ಮಠ ಕಳೆದುಕೊಂಡು ಸಂತ್ರಸ್ತರಾದರು. ರೈತರ ಬೆಳೆ ನಾಶ ಆಯಿತು. ಇದಕ್ಕೆಲ್ಲ ಪರಿಹಾರ ಕೊಟ್ಟಿದ್ದೇವೆ. ಸಾರ್ವಜನಿಕ ಆಸ್ತಿಪಾಸ್ತಿ ನಾಶ ಆಗಿದ್ದರಿಂದ ಸರ್ಕಾರ ಕನಿಷ್ಠ ಹತ್ತು ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಹೀಗಾಗಿ ಸ್ವಲ್ಪ ಆರ್ಥಿಕ ತೊಂದರೆ ಇದೆ ಎಂದರು.
ಕಾರಜೋಳ ಅವರ ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಮೇಲೆ ಅನೇಕ ಸಚಿವರ ಕಣ್ಣು ಇಟ್ಟಿದ್ದಾರೆ ಎನ್ನುವ ವಿಚಾರ, ಅದು ನನಗೆ ಗೊತ್ತಿಲ್ಲ. ಯಾರು ಕಣ್ಣು ಇಟ್ಟಿದ್ರು? ಯಾರು ಇಟ್ಟಲ್ಲ ಅಂತ. ನಾನು ಈಗಾಗಲೇ ಹೇಳಿದ್ದೇನೆ ನನಗೆ ಪಕ್ಷ ಮತ್ತು ಮುಖ್ಯಮಂತ್ರಿಗಳು ಏನು ಜವಾಬ್ದಾರಿ ಕೊಡುತ್ತಾರೆ ಅದನ್ನು ಮಾಡ್ತೇನೆ ಎಂದರು.
ಕೂಡಲೇ ಶಾಸಕಾಂಗ ಸಭೆ ಕರೆಯಬೇಕು ಎಂದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ವಿಚಾರವಾಗಿ ದಯವಿಟ್ಟು ಅದರ ಬಗ್ಗೆ ನನಗೆ ಕೇಳಬೇಡಿ ಎಂದರು