Advertisement
ಮಂಗಳವಾರ ಶಿವಾಜಿನಗರ ವಿಧಾನ ಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳು ಹಾಗೂ ಅಲ್ಲಿನ ಕುಂದು ಕೊರತೆಗಳನ್ನು ಪರಿಶೀಲಿಸಿದ ಅವರು, ಹಲಸೂರು ವಾರ್ಡ್‌ನ ಎಂ.ವಿ.ಗಾರ್ಡನ್ ಶಿಶುವಿಹಾರ, ಗ್ರಂಥಾಲಯ, ವ್ಯಾಯಾಮ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿರುವುದು ಕಂಡು ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
Related Articles
Advertisement
ಜಹಮಹಲ್ ವಾರ್ಡ್‌ನಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆ ಕಟ್ಟಡ ಕಾಮಗಾರಿ ಪರಿಶೀಲಿಸಿದ ಪರಮೇಶ್ವರ್, ಕಟ್ಟಡ ಕಾಮಗಾರಿ ಕೊನೆಯ ಹಂತದಲ್ಲಿರುವುದನ್ನು ಗಮನಿಸಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಿಗದಿಗೊಳಿಸುವಂತೆ ಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.
ಹೊಸ ಮನೆ ಕೊಡಿಸುವುದಾಗಿ ಭರವಸೆ: ಪರಿಶೀಲನೆ ವೇಳೆ ಯಲ್ಲಮ್ಮ ಕೋಳಿ ಕಾಲೋನಿಗೆ ಭೇಟಿ ನೀಡದಾಗ ಕೊಳಚೆಪ್ರದೇಶದಲ್ಲಿ 25 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ 27 ಮನೆಗಳು ದುರಸ್ಥಿಯಾಗಿವೆ. ಮಳೆಗಾಲದಲ್ಲಿ ಸೋರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಅದಕ್ಕೆ ಸ್ಪಂದಿಸಿದ ಸಚಿವರು, ಸ್ಥಳಿಯ ಶಾಸಕ ರೋಷನ್‌ಬೇಗ್ ಅವರಿಗೆ ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ಕೆಡವಿ, ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹೊಸ ಮನೆ ಕಟ್ಟಿಸಿಕೊಡುವಂತೆ ತಿಳಿಸಿದರು.
ಡಯಾಲಿಸಿಸ್ ಕೇಂದ್ರ ತೆರೆಯಲು ಸೂಚನೆ: ಮುನಿವೆಂಕಟಪ್ಪ ಕಾಲೋನಿಯ 546 ಮನೆಗಳನ್ನು ನಿರ್ಮಿಸಿ 45 ವರ್ಷವಾಗಿದ್ದು, ಅವುಗಳಲ್ಲಿ ಬಹುತೇಕ ಮನೆಗಳು ಶಿಥಿಲಗೊಂಡಿವೆ. ಈ ಮನೆಗಳ ಜಾಗವನ್ನು 99 ವರ್ಷಗಳ ಭೋಗ್ಯಕ್ಕೆ ನೀಡಲಾಗಿದೆ. ಆದರೆ, ಆ ಜಾಗದ ಹಕ್ಕು ಪತ್ರವನ್ನು ಇದುವರೆಗೆ ನೀಡಿಲ್ಲ ಎಂದು ಸ್ಥಳೀಯರು ದೂರಿದರು. ಅದಕ್ಕೆ ಪರಮೇಶ್ವರ್, ಆದಷ್ಟು ಬೇಗ ಹಕ್ಕುಪತ್ರ ಕೊಡಲು ಕ್ರಮಕೈಗೊಳ್ಳುವ ಜತೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಡಯಾಲಿಸಿಸ್ ಕೇಂದ್ರ ಆರಂಭಿಸುವಂತೆ ಅಧಿಕಾರಿಗಳು ಸೂಚಿಸಿದರು.
ಅಂಗರಕ್ಷಕನಿಂದ ಶೂ ಸ್ವತ್ಛ ಮಾಡಿಸಿಕೊಂಡರು: ಹಲಸೂರು ಕೆರೆ ಬಳಿಯ ರಾಜಕಾಲುವೆ ಪರಿಶೀಲನೆ ವೇಳೆ ಅವರ ಬಟ್ಟೆ ಹಾಗೂ ಶೂಗೆ ಮಣ್ಣಾಗಿತ್ತು. ಅದನ್ನು ಸ್ವತ್ಛಗೊಳಿಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾದಾಗ ಅವರನ್ನು ತಡೆದ ಪರಮೇಶ್ವರ್, ಅಂಗರಕ್ಷನಿಗೆ ನೀರು ತರಲು ಹೇಳಿದರು. ತಕ್ಷಣ ಅಂಗರಕ್ಷಕ ತಮ್ಮ ಕರವಸ್ತ್ರದಿಂದಲೇ ಅವರ ಅವರ ಪ್ಯಾಂಟ್ ಹಾಗೂ ಶೂ ಸ್ವತ್ಛಗೊಳಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಪರಮೇಶ್ವರ್, ಏನೋ ಅಚಾನಕ್ ಆಗಿ ಕೆಸರು ಸಿಡಿದಿತ್ತು, ಕೂಡಲೇ ನಮ್ಮ ಸಿಬ್ಬಂದಿ ಬಂದು ಅದನ್ನು ಸ್ವತ್ಛ ಮಾಡಿದ್ದಾರೆ. ಸಣ್ಣ ಸುದ್ದಿಯನ್ನು ನೀವು ಇಂಟರ್‌ನ್ಯಾಷನಲ್ ನ್ಯೂಸ್ ರೀತಿಯಲ್ಲಿ ಬಿಂಬಿಸುತ್ತಿದ್ದೀರಾ ಅದಕ್ಕೆ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.