Advertisement

ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಗಲಭೆ ನಡೆಸಿದ್ದು ಅಕ್ಷಮ್ಯ: ಡಿಸಿಎಂ ಕಟು ಟೀಕೆ

11:05 PM Jan 26, 2021 | Team Udayavani |

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ನಡೆದಿರುವ ಹಿಂಸಾಚಾರ ಸರಿಯಲ್ಲ. ನಿಜವಾದ ರೈತರು ಯಾರೂ ಹೀಗೆ ಮಾಡುವುದಿಲ್ಲ. ಇದು ಖಂಡಿತವಾಗಿಯೂ ಅಕ್ಷಮ್ಯ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

Advertisement

ತುಮಕೂರಿನಲ್ಲಿ ʼದೊಡ್ಡಮನೆ ಕೀಲು ಮೂಳೆ ಮತ್ತು ಬೆನ್ನುಮೂಳೆ ಚಿಕಿತ್ಸಾ ಕೇಂದ್ರʼದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮತನಾಡಿದ ಅವರು; “ಈಗಾಗಲೇ ರೈತರಿಗೆ ನೀಡಲಾಗಿರುವ ಸೌಲಭ್ಯಗಳ ಜತೆಗೆ ಇನ್ನಷ್ಟು ಹೊಸ ಅನುಕೂಲಗಳನ್ನು ಈ ಮಸೂದೆಗಳ ಮೂಲಕ ಮಾಡಿಕೊಡಲಾಗಿದೆ. ನೂತನ ಮಸೂದೆಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಅದರ ಹೊರತಾಗಿ ಪ್ರತಿಭಟನೆ ಮಾಡಿ ಗಲಭೆಗಿಳಿಯುವುದು ಸರಿಯಲ್ಲ” ಎಂದರು.

ರೈತರಿಗೆ ಒಳ್ಳೆಯದಾಗಬಾರದು, ಕೃಷಿ ಕ್ಷೇತ್ರಗಳಲ್ಲಿ ಸುಧಾರಣೆಗಳು ಬರಬಾರದು ಎಂಬ ಮನಃಸ್ಥಿತಿಯ ಶಕ್ತಿಗಳಿಗೆ ಕೇಂದ್ರ ಸರಕಾರ ತರುತ್ತಿರುವ ಸುಧಾರಣೆಗಳನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ನಿರಂತರವಾಗಿ ಅಡ್ಡಿ ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ದಿಲ್ಲಿಯ ಗಲಭೆಯನ್ನು ನೋಡಿದರೆ ನಮಗೆ ಉಂಟಾಗಿದ್ದ ಅನುಮಾನಗಳೆಲ್ಲ ನಿಜ ಅನಿಸುವಂತೆ ಆಗಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಇವತ್ತು ಗಣರಾಜ್ಯೋತ್ಸವ ದಿನ. ಭಾರತೀಯರೆಲ್ಲರಿಗೂ ಪವಿತ್ರವಾದ ದಿನ, ಇಂಥ ದಿನದಂದು ಈ ರೀತಿಯ ಘಟನೆ ನಡೆಯಬಾರದಿತ್ತು. ನಿಜಕ್ಕೂ ನೋವಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next