ಬೆಂಗಳೂರು: ಸೈಬರ್ ಭದ್ರತೆ, ದತ್ತಾಂಶ ವಿಜ್ಞಾನ, ಸೆಮಿಕಂಡಕ್ಟರ್ ಗಳ ಬಗ್ಗೆ ಅಧ್ಯಯನ, ಕೃತಕ ಬುದ್ಧಿಮತ್ತೆ ಸೇರಿ ಸುಮಾರು 8 ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ದೇಶಗಳೊಂದಿಗೆ ಒಡಂಬಡಿಕೆ ಮಾಡಿದ್ದೇವೆ ಎಂದು ಐಟಿ-ಬಿಟಿ ಸಚಿವರು ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಟೆಕ್ ಸೆಮ್ಮಿಟ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದೇ ದಿನ 8 ಒಡಂಬಡಿಕೆಗೆ ಸಹಿ ಹಾಕಿದ್ದೇವೆ. ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೋ ಆ ದೇಶದ ಸಂಬಂಧಪಟ್ಟ ಸಂಸ್ಥೆ ಮತ್ತುನಮ್ಮ ಸಂಸ್ಥೆಗಳ ಸಮನ್ವಯದೊಂದಿಗೆ ಒಪ್ಪಂದ ನಡೆಯಲಿದೆ ಎಂದರು.
ಡೇಟಾ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆಗೆ ಫಿನ್ ಲ್ಯಾಂಡ್ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ. ಸ್ಕಿಲ್ ಅಪ್ರೇಡೇಷನ್ ಆಗುತ್ತಿರಬೇಕು. ಸದ್ಯದಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಕೇಂದ್ರ ಆರಂಭ ಮಾಡಲಿದ್ದೇವೆ. ಕೃಷಿ, ಸಾರಿಗೆ, ಸೇವಾ ವಿಭಾಗ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಅನುಕೂಲ ಆಗಲಿದೆ ಎಂದು ಹೇಳಿದರು.
ಇದನ್ನೂ ಓದಿ:Unlock 5.0: ಕೋವಿಡ್ 19-ಮಹಾರಾಷ್ಟ್ರದಲ್ಲಿ ಡಿ.31ರವರೆಗೂ ಎಲ್ಲಾ ಶಾಲೆಗಳು ಬಂದ್
ಸ್ವೀಡನ್ ಜೊತೆ ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ) ಗಾಗಿ ಒಪ್ಪಂದ ಮಾಡುತ್ತಿದ್ದೇವೆ. ಸ್ಮಾರ್ಟ್ ಸಿಟಿ, ಹೆಲ್ತ್, ಉತ್ಪಾದನಾ ವಲಯ ಹಾಗೂ ಕೃಷಿಗೆ ಸಹಕಾರಿ ಆಗಲಿದೆ. ಸೆಮಿಕಂಡಕ್ಟರ್ ಕುರಿತು ಜರ್ಮನಿ ಮತ್ತು ಯುನೈಟೆಡ್ ಕಿಂಗ್ ಡಮ್ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.
ಸೆಮಿ ಕಂಡಕ್ಟರ್ ರಾಷ್ಟ್ರ ಮಟ್ಟದಲ್ಲಿ ವಿಸ್ತರಿಸಲು ಸೂಚನೆ ಬಂದಿದೆ. ರಕ್ಷಣೆ ಸಹಿತವಾಗಿ ಎಲ್ಲ ಕ್ಷೇತ್ರಕ್ಕೂ ಅಗತ್ಯವಿದೆ ಎಂದು ಡಿಸಿಎಂ ಹೇಳಿದರು.