Advertisement

ಡಿಸಿಸಿ ಬ್ಯಾಂಕ್‌ ಶಾಖೆಗೆ ನುಗಿದ ಮಳೆ ನೀರು

03:17 PM Oct 03, 2021 | Team Udayavani |

ಕೆ.ಆರ್‌.ಪೇಟೆ: ಪಟ್ಟಣದಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜಕಾಲುವೆ ಒತ್ತುವರಿಯಾಗಿರುವ ಕಾರಣ ಬಸ್‌ ನಿಲ್ದಾಣದಿಂದ ಮಳೆಯ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸೇರಿ ಡಿಸಿಸಿ ಬ್ಯಾಂಕ್‌ ತಾಲೂಕು ಶಾಖೆ ರಾತ್ರಿಯಿಡೀ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿತ್ತು.

Advertisement

ಬೆಳಗ್ಗೆ ನೀರು ಕಡಿಮೆಯಾಗಿದ್ದು ಬ್ಯಾಂಕ್‌ ಸಿಬ್ಬಂದಿಗಳೇ ಬ್ಯಾಂಕ್‌ನೊಳಗಿನ ನೀರನ್ನು ಹೊರಸಾಗಿಸಿ ಸ್ವತ್ಛಗೊಳಿಸಿದರು. ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಚ್‌.ಕೆ.ಅಶೋಕ್‌ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಬ್ಯಾಂಕ್‌ನಲ್ಲಿ ಸುಮಾರು 4 ಅಡಿಗಳಷ್ಟು ನೀರು ನಿಂತಿದ್ದು ಬ್ಯಾಂಕಿನಲ್ಲಿ ಕೆಳಭಾಗದಲ್ಲಿ ಇಟ್ಟಿದ್ದ ಸಣ್ಣ ಪುಟ್ಟ ಡೆಬಿಟ್‌, ಕ್ರೆಡಿಟ್‌ ಚಲನ್‌ ಸೇರಿ ಸಾಕಷ್ಟು ದಾಖಲೆ ಪತ್ರ ನೀರಿನಲ್ಲಿ ತೊಯ್ದು ಹೋಗಿವೆ.

ಇದನ್ನೂ ಓದಿ:- ಶಾರ್ಜಾದಲ್ಲಿ ರಾಹುಲ್- ವಿರಾಟ್ ಪೈಪೋಟಿ: ಟಾಸ್ ಗೆದ್ದ RCB; ಪಂಜಾಬ್ ತಂಡದಲ್ಲಿ 3 ಬದಲಾವಣೆ

ಆದರೆ ಬ್ಯಾಂಕ್‌ ಸಂಪೂರ್ಣ ಕಂಪ್ಯೂಟರೀಕರಣಗೊಂಡಿರುವ ಕಾರಣ ಗ್ರಾಹಕರ ಯಾವುದೇ ದಾಖಲೆ ಪತ್ರಗಳಿಗೆ ತೊಂದರೆ ಯಾಗಿಲ್ಲ. ಹಣ ಮತ್ತು ಗಿರಿವಿ ಒಡವೆ, ಲಾಕರ್‌ ರೂಂಗೆ ನೀರು ಹೋಗಿಲ್ಲ.  ಹೀಗಾಗಿ ಯಾವುದೇ ತೊಂದರೆಯಾಗಿಲ್ಲ ಹೀಗಾಗಿ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಅಶೋಕ್‌ ತಿಳಿಸಿದರು.

ಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿ ಜನರಲ್‌ ಮ್ಯಾನೇಜರ್‌ ರೂಪಾಶ್ರೀ ಮಾತನಾಡಿ, ಬ್ಯಾಂಕಿಗೆ ನೀರು ನುಗ್ಗಿ ಕಚೇರಿ ಪೀಠೊಪಕರಣ, ಬ್ಯಾಂಕ್‌ ಕಂಪ್ಯೂಟರೀಕರಣವಾಗುವುದಕ್ಕೂ ಮುನ್ನ ಬರೆದಿಟ್ಟಿದ್ದ ಕಡತ ದಾಖಲೆ ನೀರಿನಲ್ಲಿ ತೊಯ್ದು ಹೋಗಿವೆ.ಇದನ್ನು ಹೊರತುಪಡಿಸಿ ಉಳಿದೆಲ್ಲಾ ದಾಖಲೆ

Advertisement

ಸುರಕ್ಷತವಾಗಿವೆ. ಗ್ರಾಹಕರ ಯಾವುದೇ ದಾಖಲೆ ನಾಶವಾಗಿಲ್ಲ. ಗ್ರಾಹಕರು ಎಂದಿನಂತೆ ಇಂದಿನಿಂದಲೇ ಬ್ಯಾಂಕಿನಲ್ಲಿ ವ್ಯವಹರಿಸಬಹುದು ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಎಂ.ಎನ್‌. ಅಶ್ವತ್ಥ, ಕಿಕ್ಕೇರಿ ಶಾಖೆ ವ್ಯವಸ್ಥಾಪಕಿ ಮೀನಾಕ್ಷಿ, ಮೇಲ್ವಿಚಾರಕ ಆದಿಲ್‌ ಪಾಷಾ, ಸೀನಿಯರ್‌ ಅಕೌಂಟೆಂಟ್‌ ಗಿರಿವರ್ಧನ್‌ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬ್ಯಾಂಕ್‌ನಲ್ಲಿ ನಿಂತಿದ್ದ ನೀರನ್ನು ನೋಡಲಾಗದೇ ಬ್ಯಾಂಕ್‌ ಸಿಬ್ಬಂದಿ ವರ್ಗದವರೇ ಬ್ಯಾಂಕ್‌ ಶಾಖೆ ಸ್ವತ್ಛಗೊಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next