Advertisement

ಜನ ಸಂಚಾರ ನಿಯಂತ್ರಣಕ್ಕೆ ರಸ್ತೆಗಿಳಿದ ಡೀಸಿ

06:43 PM May 02, 2021 | Team Udayavani |

ಹಾಸನ: ಜನತಾ ಲಾಕ್‌ಡೌನ್‌ಜಾರಿಯಾದ 3ದಿನಗಳ ನಂತರ ಜನರಸಂಚಾರ ನಿಯಂತ್ರಿಸಲು ಜಿಲ್ಲಾಧಿಕಾರಿಆರ್‌.ಗಿರೀಶ್‌ ಅವರೇ ಖುದ್ದು ರಸ್ತೆಗಿಳಿದುಅನಗತ್ಯವಾಗಿ ತಿರುಗುತ್ತಿದ್ದವರಿಗೆ ಬಿಸಿಮುಟ್ಟಿಸಿದರು.

Advertisement

ಅಗತ್ಯ ವಸ್ತುಗಳ ಖರೀದಿಗೆ ಮುಂಜಾನೆ6 ಗಂಟೆಯಿಂದ 10 ಗಂಟೆವರೆಗೆ ಅವಕಾಶನೀಡಲಾಗಿದೆ. ಪ್ರಮುಖ ರಸ್ತೆಗಳ ಹೊರತಾಗಿ ನಗರದಲ್ಲಿ ಪೊಲೀಸರ ಸುಳಿವೇಇರುವುದಿಲ್ಲ. ಹಾಗಾಗಿ ಜನ ನಿರ್ಭಯವಾಗಿ 10 ಗಂಟೆ ನಂತರವೂ ಸಂಚರಿಸುತ್ತಿದ್ದು, ಲಾಕ್‌ಡೌನ್‌ನ್ನು ಅಣಕಿಸುವಂತಿದೆ.ಲಾಕ್‌ಡೌನ್‌ನಲ್ಲಿ ಜನರ ‌ ಸಂಚಾರಕ್ಕೆನಿಯಂತ್ರಣವೇ ಇಲ್ಲ ಎಂಬ ದೂರಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ನಗರದ ಎನ್‌.ಆರ್‌.ವೃತ್ತದಲ್ಲಿ ಕೆಲಕಾಲಹಾಜರಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದವಾಹನಗಳನ್ನು ತಡೆದು ತರಾಟೆಗೆ ತೆಗೆದುಕೊಂಡರು.

ಕೆಲವು ವಾಹನಗಳಚಾಲಕರಿಗೆ ಸ್ಥಳದಲ್ಲಿದ್ದ ಪೊಲೀಸರಿಂದದಂಡ ಹಾಕಿಸಿ ಬಿಸಿ ಮುಟ್ಟಿಸಿದರು.ನಗರದ ಕಟ್ಟಿನಕೆರೆ ಆವರಣದಲ್ಲಿ ಜನಗುಂಪು, ಗುಂಪಾಗಿ ಅಂಗಡಿಗಳ ಮುಂದೆನಿಂತು ತರಕಾರಿ, ದಿನಸಿ ಖರೀದಿಸುತ್ತಿದ್ದರಿಂದ ನಗರಸಭೆ ಅಧಿಕಾರಿಗಳು,ಮಾರ್ಷಲ್ಸ್‌, ಪೊಲೀಸರು, ಬೆಳಗ್ಗೆ8ಗಂಟೆಗೆ ಅಂಡಿಗಳನ್ನು ಮುಚ್ಚಿಸಿದರು.ನಂತರ ವ್ಯಾಪಾರಿಗಳು ಸಾಮಾಜಿಕ ಅಂತರಕಾಯ್ದುಕೊಂಡು ವ್ಯಾಪಾರ ಮಾಡುವುದಾಗಿ ಮನವಿ ಮಾಡಿಕೊಂಡಿದ್ದರಿಂದ 10ಗಂಟೆವರೆಗೂ ವ್ಯಾಪಾರಕ್ಕೆ ಅವವಕಾಶ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next