Advertisement

ನಾಡ ಕಚೇರಿಗೆ ಡಿಸಿ ದಿಢೀರ್‌ ಭೇಟಿ- ಪರಿಶೀಲನೆ

06:03 PM Aug 18, 2021 | Team Udayavani |

ಯಾದಗಿರಿ: ಮನೆ-ಮನೆಗೆ ತೆರಳಿ ಲಸಿಕೆ ನೀಡಿ. ಮೂರನೇ ಅಲೆ ತಡೆಯಲು ಸಹಕರಿಸಿ. ಪ್ರತಿ ಆಶಾ ಕಾರ್ಯಕರ್ತೆಯರು ಕನಿಷ್ಠ 30 ಜನರಿಗೆ ಲಸಿಕೆ ನೀಡುವ ಗುರಿ ಹೊಂದಬೇಕು. ಶಾಲಾ ಶಿಕ್ಷಕರು, ಗ್ರಾಪಂ ಅಧ್ಯಕ್ಷರು, ಸದಸ್ಯರೆಲ್ಲರೂ ಲಸಿಕೆ ಪಡೆದು ಜನರಿಗೆ ಮನವೊಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ಸೂಚಿಸಿದರು.

Advertisement

ವಡಿಗೇರಾ ತಾಲೂಕಿನ ನಾಯ್ಕಲ್‌, ಶಹಾಪುರ ತಾಲೂಕಿನ ಖಾನಾಪೂರ, ದೋರನಹಳ್ಳಿ ಗ್ರಾಮಗಳ ಲಸಿಕಾಕರಣ ಕೇಂದ್ರಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಲಸಿಕಾಕರಣದ ಬಗ್ಗೆ ಜನರು ಧನಾತ್ಮಕ ಸ್ಪಂದಿಸಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ಮತ್ತು ಬೀದಿ ನಾಟಕಗಳಂತಹ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ತಾಲೂಕಿನ ಅ ಧಿಕಾರಿಗಳಿಗೆ ಸೂಚಿಸಿದರು. ನಾಯ್ಕಲ್‌ ಗ್ರಾಮದಲ್ಲಿ 7188 ಜನರಿಗೆ ಲಸಿಕಾ ಗುರಿ ಹೊಂದಿದ್ದು, ಇಲ್ಲಿಯವರೆಗೆ 4035 ಜನರಿಗೆ ಲಸಿಕೆ ನೀಡಿ ಶೇಕಡಾ 55 ರಷ್ಟು ಪ್ರಗತಿ ಸಾಧಿಸಿದೆ.

ಖಾನಾಪೂರ ಗ್ರಾಮದಲ್ಲಿ 5488 ಜನರಿಗೆ ಗುರಿ ಹೊಂದಿದ್ದು, ಇಲ್ಲಿಯವರೆಗೆ 3068 ಜನರಿಗೆ ನೀಡಿ ಶೇಕಡಾ 50 ರಷ್ಟು ಲಸಿಕೆ ನೀಡಿದೆ. ದೋರನಹಳ್ಳಿ ಗ್ರಾಮದಲ್ಲಿ 6058 ಜನರಿಗೆ ಗುರಿ ಹೊಂದಿದ್ದು, 4871ಜನರಿಗೆ ಲಸಿಕೆ ನೀಡಿ ಶೇ.55 ರಷ್ಟು ಪ್ರಗತಿ ಸಾಧಿ ಸಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಆರ್‌.ಸಿ.ಎಚ್‌.ಒ ಡಾ| ಲಕ್ಷ್ಮಿಕಾಂತ ಒಂಟಿಪೀರ, ಶಹಾಪುರ ತಹಶೀಲ್ದಾರ್‌ ಮಧುರಾಜ್‌ ಇದ್ದರು.

ಶಹಾಪುರ ತಾಲೂಕಿನ ದೋರನಹಳ್ಳಿ ಮತ್ತು ಗೋಗಿಕೆ ನಾಡ ಕಚೇರಿಗೆ ಜಿಲ್ಲಾಧಿಕಾರಿ ದಿಢೀರ್‌ ಭೇಟಿ ನೀಡಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲಿಸಿದರು. 3 ಮತ್ತು 9 ಕಲಂ ಮಿಸ್‌ ಮ್ಯಾಚ್‌, ಪೈಕಿ ಪಹಣಿ, ಮೋಜನಿ ಕಡತಗಳು, ಸ್ಮಶಾನ ಭೂಮಿಗಳ ಲಭ್ಯತೆ ಬಗ್ಗೆ ಹಾಗೂ ಸಕಾಲ ಯೋಜನೆಗಳ ಪ್ರಗತಿಯ ಮಾಹಿತಿ ಪಡೆದರು. ಪ್ರತಿ 15 ದಿವಸಕ್ಕೊಮ್ಮೆ ತಾಲೂಕು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಕಡ್ಡಾಯವಾಗಿ ಮಾಡಬೇಕು. ಪ್ರಗತಿ ಕುಂಠಿತವಾಗದಂತೆ ಪ್ರಗತಿ ಸಾಧಿಸಬೇಕು ಎಂದು ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next