346 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿ ಫಾಲೋಆನ್‌ಗೆ ತುತ್ತಾದ ವೆಸ್ಟ್ ಇಂಡೀಸ್, ದ್ವಿತೀಯ ಇನ್ನಿಂಗ್ಸ್‌ನಲ್ಲೂ ಘೋರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಇಂಗ್ಲೆಂಡ್ ದಾಳಿಗೆ ಸಿಲುಕಿ ಕೇವಲ 137 ರನ್ನಿಗೆ ಸರ್ವಪತನ ಕಂಡಿತು.
Advertisement
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 8ಕ್ಕೆ 514 ರನ್ ಪೇರಿಸಿ ಡಿಕ್ಲೇರ್ ಮಾಡಿತ್ತು. ಒಂದಕ್ಕೆ 44 ರನ್ ಮಾಡಿದಲ್ಲಿಂದ ತೃತೀಯ ದಿನದ ಆಟ ಆರಂಭಿಸಿದ ವಿಂಡೀಸಿಗೆ ಆಂಗ್ಲರ ಬೌಲಿಂಗನ್ನು ತಡೆದು ನಿಲ್ಲಲು ಸಾಧ್ಯವಾಗಲಿಲ್ಲ. ಕೇವಲ 168 ರನ್ನಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಫಾಲೋಆನ್ ಬಳಿಕವೂ ಕೆರಿಬಿಯನ್ನರ ಬ್ಯಾಟಿಂಗ್ ಬರಗಾಲ ಮುಂದು ವರಿಯಿತು. ಈ 19 ವಿಕೆಟ್‌ಗಳು ಒಂದೇ ದಿನ ಉರುಳಿದ್ದು ಕೆರಿಬಿಯನ್ನರ ಕ್ರಿಕೆಟ್ ಅವಸ್ಥೆಗೆ ಸಾಕ್ಷಿ. ಈ ಎರಡೂ ಇನ್ನಿಂಗ್ಸ್‌ಗಳಲ್ಲಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಸರದಿಯಲ್ಲಿ ದಾಖಲಾದದ್ದು ಒಂದು ಅರ್ಧ ಶತಕ ಮಾತ್ರ. ಇದನ್ನು ಬ್ಲ್ಯಾಕ್‌ವುಡ್ ಮೊದಲ ಸರದಿಯಲ್ಲಿ ಹೊಡೆದಿದ್ದರು (79). 243 ರನ್ ಬಾರಿಸಿದ ಇಂಗ್ಲೆಂಡ್ ಆರಂಭಕಾರ ಅಲಸ್ಟೇರ್ ಕುಕ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ವೆಸ್ಟ್ ಇಂಡೀಸ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ವಿಜೇತ ಬಳಗವನ್ನೇ ಉಳಿಸಿಕೊಂಡಿದೆ. ಈ ಪಂದ್ಯ ಆ. 25ರಿಂದ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಆರಂಭವಾಗಲಿದೆ.
Related Articles
Advertisement