Advertisement

Panaji: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳ; ತತ್ತರಿಸಿ ಹೋದ ಜನತೆ

03:29 PM Apr 05, 2024 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಬಿಸಿಲಿನ ತಾಪದಿಂದ ಜನತೆ ತತ್ತರಿಸಿ ಹೋಗುವಂತಾಗಿದೆ. ರಾಜ್ಯದಲ್ಲಿ ಗರಿಷ್ಠ ತಾಪಮಾನ 33.5 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಕಳೆದ ಕೆಲವು ದಿನಗಳಲ್ಲಿ 34 ಡಿಗ್ರಿ ತಲುಪಿತ್ತು.

Advertisement

ಗೋವಾ ರಾಜ್ಯದಲ್ಲಿ ನಿರಂತರವಾಗಿ ಏರುತ್ತಿರುವ ತಾಪಮಾನದಿಂದಾಗಿ, ಏಪ್ರಿಲ್‍ನಲ್ಲಿ ರಾಜ್ಯದಲ್ಲಿ ಬಿಸಿಗಾಳಿ ಉಂಟಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಗೋವಾ ಹವಾಮಾನ ವೀಕ್ಷಣಾಲಯವು ಈ ಶುಷ್ಕ ಬಿಸಿಲಿನಲ್ಲಿ ಮಳೆ ಬರುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ. ಸೋಮವಾರದಿಂದ 3 ದಿನಗಳ ಕಾಲ ಅಂದರೆ ಏಪ್ರಿಲ್ 8 ರಿಂದ 10 ರವರೆಗೆ ರಾಜ್ಯದ ಕೆಲ ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎನ್ನಲಾಗಿದೆ.

ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ನಾಗರಿಕರು ಮಳೆಗಾಗಿ ಕಾಯುತ್ತಿದ್ದಾರೆ. ಶುಕ್ರವಾರ ಪಣಜಿಯಲ್ಲಿ ಗರಿಷ್ಠ ತಾಪಮಾನ 33.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ರಾಜ್ಯದಲ್ಲಿ ಬೆಳಿಗ್ಗೆ 73 ಮತ್ತು ಸಂಜೆ 59 ರಷ್ಟು ದಾಖಲಾಗಿದೆ, ಇದು ಸಾಮಾನ್ಯ ತೇವಾಂಶಕ್ಕಿಂತ 7% ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next